ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ಗುಂಪುನಿಂದ ಬೇರ್ಪಟ್ಟು ಒಂಟಿಯಾಗಿ ಜನವಸತಿ ಪ್ರದೇಶದಲ್ಲೇ ಬಾಕಿಯಾಗಿತ್ತು.
ಮರಿಯಾನೆಯನ್ನು ಆನೆಗಳ ಗುಂಪಿಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಲೇ ಇತ್ತು, ಇದೀಗ ಅರಣ್ಯ ಇಲಾಖೆಯ ಪ್ರಯತ್ನ ಯಶಸ್ವಿಯಾಗಿದ್ದು ಮೂರು ಬಾರಿ ಆನೆ ಮರಿಯೊಂದಿಗೆ ಕಾಡಿಗೆ ಹೋಗಿ ಕೊನೆಗೂ ಮರಿಯಾನೆ ತನ್ನ ಗುಂಪಿನಲ್ಲಿ ಸೇರುವಂತೆ ಮಾಡಿದ್ದಾರೆ.
ಶುಕ್ರವಾರ ಸಂಜೆಯ ವೇಳೆಗೆ ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ ಬಳಿಯಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ತನ್ನ ಗುಂಪು ಸೇರಿರುವುದಾಗಿ ತಿಳಿದು ಬಂದಿದೆ.
- Monday
- November 25th, 2024