Ad Widget

ಮಂಡೆಕೋಲು ಪ್ರಾ.ಕೃ.ಪ.ಸ.ಸಂಘದ ಪೇರಾಲು- ಅಂಬ್ರೋಟಿ ನವೀಕೃತ ಶಾಖೆ ಉದ್ಘಾಟನೆ

ಸಹಕಾರಿ ಸಂಘ ರೈತರ ಅಭಿವೃದ್ಧಿಗಾಗಿಯೇ ಹುಟ್ಟಿಕೊಂಡ ಸಂಸ್ಥೆ : ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ: ಸಹಕಾರಿ ಸಂಘಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾದ ಸಂಸ್ಥೆ. ಆ ಊರಿನ ರೈತರ ಅಭಿವೃದ್ದಿಗಾಗಿಯೇ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಹುಟ್ಟಿನಿಂದ ಸಾಯುವ ವರೆಗೆ ಕೃಷಿಕರಿಗೆ ಸಕಲ ಸೌಲಭ್ಯಗಳನ್ನು ನೀಡುವ ಬದ್ಧತೆ ಹೊಂದಿರುವ ಸಹಕಾರಿ ಸಂಘವನ್ನು ನಮ್ಮ ಸಂಸ್ಥೆ ಎಂಬ ಪ್ರೀತಿಯಿಂದ ಪ್ರೋತ್ಸಾಹಿಸಿ ಬೆಳೆಸಬೇಕಾದ ಜವಾಬ್ದಾರಿ ನಮಗಿದೆ ಎಂದು ಶಾಸಕಿ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಬುಧವಾರ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪೇರಾಲು – ಅಂಬ್ರೋಟಿ ನವೀಕೃತ ಶಾಖೆಯ ಹಾಗೂ
ಮಲ್ಟಿ ಸರ್ವಿಸ್ ಸೆಂಟರ್ ಉದ್ಘಾಟಿಸಿ, ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ಮೋದಿಯವರ ಫಸಲು ಭೀಮಾ ಯೋಜನೆಯಲ್ಲಿ ರೈತರಿಗೆ ಲಕ್ಷಗಟ್ಟಲೆ ವಿಮಾ ಮೊತ್ತ ಸಿಕ್ಕಿದ್ದರೆ ಅದಕ್ಕೆ ಸಹಕಾರಿ ಸಂಘಗಳ ಸಹಕಾರ ಕಾರಣ ಎಂದವರು ಹೇಳಿದರು.
ಗೋದಾಮು ಕಟ್ಟಡವನ್ನು ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ ಲಾಭ ಬಯಸದೇ ಊರ ಜನರ ಅರ್ಥಿಕ ಸದೃಢತೆಗಾಗಿ ಸಹಕಾರ ಸಂಘಗಳು ಕೆಲಸ ಮಾಡುತ್ತದೆ. ದಕ್ಷಿಣ ಕನ್ನಡದ ಎಲ್ಲ ಸಹಕಾರ ಸಂಘಗಳೂ ರೈತರಿಗೆ ಗರಿಷ್ಟ ಸೌಲಭ್ಯಗಳನ್ನು ನೀಡುತ್ತಿದೆ. ಇಂತಹ ಸಂಸ್ಥೆಗಳಿಗೆ ನಾವೆಲ್ಲರೂ ಶಕ್ತಿ ನೀಡಬೇಕು ಎಂದು ಹೇಳಿದರು.
ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಪ್ರಭಾಕರ ನಾಯಕ್, ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪಾಂಡುರಂಗ ರಾವ್ ಪುತ್ಯ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಹಾಗೂ ತಾಂತ್ರಿಕ ಸಲಹೆಗಾರರಾದ ಶ್ರೀಪಾದ ಕನ್ಸಲ್ಟೆನ್ಸಿಯ ಮಾಲಕರಾದ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷರಾದ ಜಲಜಾ ದೇವರಗುಂಡ, ನಿರ್ದೇಶಕರಗಳಾದ ಈಶ್ವರ ಚಂದ್ರ ಕೆ. ಆರ್., ಚಂದ್ರಜಿತ್ ಮಾವಂಜಿ, ಪದ್ಮನಾಭ ಚೌಟಾಜೆ, ಭಾರತಿ ಉಗ್ರಾಣಿಮನೆ, ಮೋನಪ್ಪ ನಾಯ್ಕ್ ಬೇಂಗತ್ತಮಲೆ, ಭಾಸ್ಕರ್ ಮಿತ್ತಪೇರಾಲು, ಸರಸ್ವತಿ ಕಣೆಮರಡ್ಕ, ರವಿ ಚೇರದಮೂಲೆ, ಸುನಿಲ್ ಪಾತಿಕಲ್ಲು ಹಾಗೂ ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಶಶಿಕುಮಾರ್ ರೈ ಬಾಲ್ಯೋಟ್ಟು, ಶ್ಯಾಮ್ ಪ್ರಸಾದ್ ಅಡ್ಡಂತ್ತಡ್ಕ, ಸಂಧ್ಯಾ ಮಂಡೆಕೋಲು ಅವರನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಪದ್ಮನಾಭ ಚೌಟಾಜೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ. ವರದಿ ವಾಚಿಸಿದರು. ನಿರ್ದೇಶಕ ಚಂದ್ರಜಿತ್ ಮಾವಂಜಿ ವಂದಿಸಿದರು. ನಿರ್ದೇಶಕ ಸುರೇಶ್ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!