Ad Widget

ಜ.18 : ಪೆರುವಾಜೆ ಜಲದುರ್ಗಾದೇವಿ ದೇವಸ್ಥಾನದ ಬಲಿಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆ

ಪೆರುವಾಜೆ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಯ ಬಲಿ ಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆ ಜ.18ರಂದು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷ ಪಿ.ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ‌.

. . . . . . . . .

ಪೆರುವಾಜೆ ದೇವಳದಲ್ಲಿ ಬ್ರಹ್ಮರಥ ಸಮರ್ಪಣೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು ಶತಮಾನದ ಬಳಿಕ ದೇವಳಕ್ಕೆ ಬ್ರಹ್ಮ ರಥ ಸಮರ್ಪಣೆಯಾಗಿದ್ದು ಜ.19ರಂದು ಬ್ರಹ್ಮ ರಥೋತ್ಸವ ನಡೆಯಲಿದೆ‌. ಈ ಪ್ರಯುಕ್ತ ಸುಮಾರು ಎಂಟು ಲಕ್ಷ ರೂ ವೆಚ್ಚದಲ್ಲಿ ದೇವಳದ ವತಿಯಿಂದ ಉತ್ಸವ ಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

. . . . . . .

ಇಂದು ಬ್ರಹ್ಮರಥ ಸಮರ್ಪಣೆಯಾಗಿದೆ. ಇಂದಿನಿಂದ ಕ್ಷೇತ್ತದಲ್ಲಿ ಜಾತ್ರೋತ್ಸವ ನಡೆಯಲಿದ್ದು ಜ.19ರಂದು ಬ್ರಹ್ಮರಥೋತ್ಸವ ನಡೆಯಲಿದೆ ಎಲ್ಲಾ ಭಕ್ತರು ಭಾಗವಹಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅವರು ವಿನಂತಿಸಿದರು.

ವ್ಯವಸ್ಥಾಪನಾ ಸಮಿತಿಯ ಮಾಜಿ‌ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಜಿ.ಪಂ. ಮಾಜಿ ಸದಸ್ಯೆ ರಾಜೀವಿ ಆರ್.ರೈ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಮಂಜಪ್ಪ ರೈ ಬೆಳ್ಳಾರೆ, ದೇವದಾಸ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading