ಸುಳ್ಯದ ಕೆಲವು ಭಾಗಗಳಲ್ಲಿ ಬ್ಯಾನರ್ ಗಳಿಗೆ ಕಿಡಿಗೇಡಿಗಳು ಹಾನಿ ಮಾಡುತ್ತಿದ್ದು, ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ಲೆಕ್ಸ್ ಸಂಸ್ಥೆ ಮಾಲಕರೊಂದಿಗೆ ಸಭೆಯನ್ನು ಜ.೧೫ರಂದು ಮಾಡಲಾಗಿತ್ತು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾನರ್ ಗಳಿಗೆ ಸಂಬಂಧಪಟ್ಟವರೇ ಜವಾಬ್ದಾರಿ ತೆಗೆದುಕೊಳ್ಳಲು ಸೂಚನೆ:
ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿಯವರು ಸಂಸ್ಥೆಗಳ ಮಾಲಕರೊಂದಿಗೆ ಮಾತನಾಡಿ ನಗರ ಮತ್ತು ಗ್ರಾಮೀಣ ಪ್ರದೇಶದ ಯಾವುದೇ ಭಾಗಗಳಲ್ಲಿ ಕಾರ್ಯಕ್ರಮ ಇನ್ನಿತರ ಸಂಸ್ಥೆಗಳ ಪ್ರಚಾರ ಬ್ಯಾನರ್ ಗಳನ್ನು ಅಳವಡಿಸುವ ಸಂದರ್ಭ ಸಿಸಿ ಕ್ಯಾಮೆರಾ ಗಳು ಇರುವ ಸ್ಥಳವನ್ನು ಆಯ್ಕೆ ಮಾಡಿ ಅಳವಡಿಸುವಂತೆ ಸೂಚನೆ ನೀಡಿದರು. ಅಲ್ಲದೆ ಬ್ಯಾನರ್ ಗಳಿಗೆ ಸಂಬಂಧಪಟ್ಟವರಿಗೆ ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು, ಡಿಜಿ ಪ್ಲಸ್ ಮಾಲಕ ಚಂದ್ರಶೇಖರ ನಂಜೆ, ಸೀಮಾ ಸಂಸ್ಥೆಯ ಮಾಲಕ ಜಯಂತ್ ಶೆಟ್ಟಿ, ಡಿಸೈನ್ ಫ್ಯಾಕ್ಟರಿ ಮಾಲಕ ಅಕ್ಷಯ್ ಉಪಸ್ಥಿತರಿದ್ದರು.