ಕೊಲ್ಲಮೊಗ್ರ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.16 ರಿಂದ ಜ.19 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಜ.16 ಮಂಗಳವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಅಶ್ವತ್ಥ ಪ್ರತಿಷ್ಠಾಂಗ ಪೂರ್ವಭಾವಿ ವೈದಿಕ ಕಾರ್ಯಕ್ರಮಗಳು ಮತ್ತು ನಾಗನಲ್ಲಿ ಅನುಜ್ಞಾ ಕಲಶ ಪ್ರಾರ್ಥನೆ, ಮದ್ಯಾಹ್ನ 12:00 ಗಂಟೆಯಿಂದ ಹಸಿರುವಾಣಿ ಸಮರ್ಪಣೆ, ಸಂಜೆ 6:00 ಗಂಟೆಯಿಂದ ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ ಹಾಗೂ ವಾಸ್ತುಬಲಿ, ಕಲಶ ಪ್ರತಿಷ್ಠೆ, ಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ ನಡೆಯಲಿದೆ.
ಜ.17 ಬುಧವಾರದಂದು ಬೆಳಿಗ್ಗೆ 5:00 ಗಂಟೆಯಿಂದ ಅಶ್ವತ್ಥ ಹಾಗೂ ನಾಗಪ್ರತಿಷ್ಠಾಂಗ ಹೋಮ, ಆಶ್ಲೇಷಬಲಿ, 8:43ರ ಮಕರ ಲಗ್ನದ ಶುಭಮುಹೂರ್ತದಲ್ಲಿ ಅಶ್ವತ್ಥ ನಾರಾಯಣ ಪ್ರತಿಷ್ಠೆ, ಅಶ್ವತ್ಥ ಉಪನಯನ, ಅಶ್ವತ್ಥ ವಿವಾಹ ನಂತರ ನಾಗನ ಸಾನಿಧ್ಯ ಪ್ರತಿಷ್ಠೆ ನಡೆಯಲಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಶ್ರೀ ಗಣಪತಿ ಹವನ, ಬೆಳಿಗ್ಗೆ 11:00 ಗಂಟೆಯಿಂದ ಕಲಶಾಭಿಷೇಕ, ಬೆಳಿಗ್ಗೆ 11:30 ರಿಂದ ನಾಗತಂಬಿಲ, ಮದ್ಯಾಹ್ನ 12:30 ರಿಂದ ಮಹಾಪೂಜೆ, ಮಂತ್ರಾಕ್ಷತೆ, ಮದ್ಯಾಹ್ನ 1:00 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6:00 ಗಂಟೆಯಿಂದ ಕುಣಿತ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 7:00 ಗಂಟೆಯಿಂದ ಕಟ್ಟ ಚಾವಡಿಯಿಂದ ದೈವಗಳ ಭಂಡಾರ ಹೊರಡುವುದು, ರಾತ್ರಿ 7:30 ರಿಂದ ವಿಶೇಷ ಕಾರ್ತಿಕ ಪೂಜೆ, ರಾತ್ರಿ 8:00 ಗಂಟೆಯಿಂದ ಸಂತ ಭದ್ರಗಿರಿ ಅಚ್ಯುತದಾಸರ ಶಿಷ್ಯ ಕಥಾ ಕೀರ್ತನ ಕೋವಿದ ಸಿರಿವಿಠಲಾಂಕಿತ ಈಶ್ವರದಾಸ ಕೊಪ್ಪೇಸರ ಯಲ್ಲಾಪುರ(ಉತ್ತರಕನ್ನಡ) ಇವರಿಂದ ಹರಿಕಥೆ ನಡೆಯಲಿದ್ದು, ರಾತ್ರಿ 9:00 ಗಂಟೆಯಿಂದ ಅನ್ನಸಂತರ್ಪಣೆ ಹಾಗೂ 9:30 ರಿಂದ ಅರುಹಿ ಆರ್ಟ್ ಫೌಂಡೇಶನ್ ಸುಬ್ರಹ್ಮಣ್ಯ ಇದರ ನೃತ್ಯ ಗುರುಗಳಾದ ಕು| ಅನಘಾ.ಯಂ.ಜಿ ಸುಬ್ರಹ್ಮಣ್ಯ ಹಾಗೂ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಹಾಗೂ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಮಯೂರ ಭಜನಾ ಮಂಡಳಿ ಕಟ್ಟ-ಗೋವಿಂದನಗರ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಶಕ್ತಿನಗರ-ಕಲ್ಮಕಾರು ಹಾಗೂ ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಕೊಲ್ಲಮೊಗ್ರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಜ.18 ಗುರುವಾರದಂದು ಬೆಳಿಗ್ಗೆ 9:00 ಗಂಟೆಯಿಂದ ದೇವಳದಲ್ಲಿ ದೈವಗಳ ನೇಮ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಮದ್ಯಾಹ್ನ 1:00 ಗಂಟೆಯಿಂದ ಮಿತ್ತೋಡಿ ಚಾವಡಿಗೆ ದೇವಳದಿಂದ ದೈವಗಳ ಭಂಡಾರ ಹೊರಡುವುದು, ರಾತ್ರಿ 10:00 ಗಂಟೆಯಿಂದ ಗಾಣಿಗಮಜಲುಚಾಳೆಪ್ಪಾಡಿ-ಕೊಲ್ಲಮೊಗ್ರದಲ್ಲಿ ಶ್ರೀ ಅಗ್ನಿಗುಳಿಗ ರಾಜ ನೇಮೋತ್ಸವ ನಡೆಯಲಿದೆ.
ಜ.19 ಶುಕ್ರವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಮಿತ್ತೋಡಿಯಲ್ಲಿ ದೈವಗಳ ನೇಮ, ಸಂಜೆ 4:00 ಗಂಟೆಯಿಂದ ಕಟ್ಟ ಚಾವಡಿಗೆ ದೈವಗಳ ಭಂಡಾರ ಹೊರಡಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)