ಸಭೆಯಲ್ಲಿ ಶಾಶ್ವತ ಚಪ್ಪರ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಜಾತ್ರೆಯ ಮುನ್ನ ದೇವಳದ ಎದುರು ಭಾಗದಲ್ಲಿ ಶಾಶ್ವತ ಚಪ್ಪರ ನಿರ್ಮಾಣ ಆಗಬೇಕು. ಈಗಾಗಲೇ ಉಳ್ಳಾಕುಲು ಚಾವಡಿಯ ನಿರ್ಮಾಣದ ಕೆಲಸ ಕಾರ್ಯಗಳು ನಡೆಯುತ್ತಿವೆ, ಕಾಂಪೌಂಡ್ ರಚಿಸುವ ಬಗ್ಗೆ ಹಾಗೂ ಜಾತ್ರೆಯ ಆಮಂತ್ರಣ ಪತ್ರ ಹಂಚುವಿಕೆ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿಅನುವಂಶಿಕ ಆಡಳಿತ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ, ಶ್ರೀಪತಿ ಬೈಪಡಿತ್ತಾಯ, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ವ್ಯ.ಸ.ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ ಉಪಸ್ಥಿತರಿದ್ದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಕುಂಭಕೋಡು, ಅಚ್ಚುತ ಮಣಿಯಾಣಿ ಆಲೆಟ್ಟಿ, ಜಗದೀಶ್ ಸರಳಿಕುಂಜ, ಒತ್ತೆಕೋಲ ಸಮಿತಿ ಅಧ್ಯಕ್ಷ ಸುಧಾಕರ ಆಲೆಟ್ಟಿ, ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಕೋಶಾಧಿಕಾರಿ ಶ್ರೀನಾಥ್ ಆಲೆಟ್ಟಿ, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ, ಕೋಶಾಧಿಕಾರಿ ಸುಂದರ ಆಲೆಟ್ಟಿ, ಸದಸ್ಯರಾದ ಲಕ್ಷ್ಮಣ ಗೌಡ ಪರಿವಾರ, ಮಾಧವ ಗುಂಡ್ಯ, ಲತೀಶ್ ಗುಂಡ್ಯ, ನಾರಾಯಣ ರೈ ಆಲೆಟ್ಟಿ, ಚಂದ್ರಶೇಖರ ಆಲೆಟ್ಟಿ, ರೂಪಾನಂದ ಗುಂಡ್ಯ, ವಿನೋದ್ ಗುಂಡ್ಯ, ದಿನೇಶ್ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ರಚನ್ ಆಲೆಟ್ಟಿ, ನವೀನ್ ಕುಮಾರ್ ಗುಂಡ್ಯ, ಸಚಿನ್ ಗುಂಡ್ಯ, ಗಿರೀಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದರು ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಫೆ.14 ರಿಂದ 18 ರ ತನಕ ನಡೆಯಲಿದೆ. ಜಾತ್ರೋತ್ಸವದ ಪೂರ್ವ ಭಾವಿ ಸಭೆಯು ಜ.15 ರಂದು ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ವಹಿಸಿದ್ದರು.