Ad Widget

ಸುಳ್ಯ; ಯುವ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ

ನೆಹರೂ ಯುವ ಕೇಂದ್ರ ಮಂಗಳೂರು, ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ, ಮತ್ತು ಕಪಿಲ ಯುವಕ ಮಂಡಲ (ರಿ) ಜಟ್ಟಿಪಳ್ಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮಂಡಲದ ಬೆಳ್ಳಿ ಹಬ್ಬದ ಅಂಗವಾಗಿ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ’ಯುವ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವು ಜಟ್ಟಿಪಳ್ಳದ ಯುವ ಸದನ ದಲ್ಲಿ ಜ .14 ರಂದು ಜರುಗಿತು. ನಗರ ಪಂಚಾಯಿತಿನ ಮಾಜಿ ಉಪಾಧ್ಯಕ್ಷ ರಾದ ಶ್ರೀಮತಿ ಸರೋಜಿನಿ ಪೆಲತ್ತಡ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಭಾಷಣ ಗಾರರಾಗಿ ಆಗಮಿಸಿದ ನಿವೃತ್ತ ಕೈಗಾರಿಕಾ ವಿಸ್ತರಿಸರಣಾಧಿಕಾರಿ ಲಯನ್ ವೀರಪ್ಪ ಗೌಡ ಕಣ್ಕಲ್ ರವರು ಯುವಜನರಿಗೆ ಸ್ವಾಮಿ ವಿವೇಕಾನಂದರು ನೀಡಿದ ತತ್ವ ಆದರ್ಶಗಳ ಬಗ್ಗೆ ತಿಳಿಸಿದರು. ಸಭಾಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಶ್ರೀ ತೇಜಕುಮಾರ್ ಇವರನ್ನು ಯುವಸನ್ಮಾನ ನೀಡಿ ಗೌರವಿಸಲಾಯಿತು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಜೆ ರೈ ,ಕಪಿಲ ಯುವಕ ಮಂಡಲದ ಅಧ್ಯಕ್ಷ ಶ್ರೀ ಹರೀಶ ಜಿ ಜೆ ,ಕಟ್ಟಡ ಸಮಿತಿಯ ಅಧ್ಯಕ್ಷ ರಾದ ಶ್ರೀ ರಘುನಾಥ ಜಟ್ಟಿಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಮತಿ ಜಯಂತಿ ಜೆ ರೈ ಯವರು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್ ನಿರೂಪಿಸಿದರು..ಕಪಿಲ ಯುವಕ ಮಂಡಲದ ಉಪಾಧ್ಯಕ್ಷ ಶ್ರೀ ವಿಪಿನ್ ಕರ್ಕೇರ ಸ್ವಾಗತಿಸಿದರು..ಮಹಿಳಾ ಮಂಡಲದ ಪೂರ್ವಾದ್ಯಕ್ಷೆ ಶ್ರೀಮತಿ ಸುನೀತ ರಾಮಚಂದ್ರ ವಂದಿಸಿದರು. ಈ ಸಂದರ್ಭ ದಲ್ಲಿ ಮಹಿಳಾ ಮಂಡಲದ ಸಲಹೆಗಾರರಾದ ಶ್ರೀ ದಿನೇಶ್ ಮಡಪ್ಪಾಡಿ, ಶ್ರೀ ರಮಾನಂದ ರೈ, ಮಹಿಳಾ ಮಂಡಲದ ಸದಸ್ಯರು, ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading