ಸುಳ್ಯದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಮತ್ತು ಅಲ್ಲಲ್ಲಿ ಬ್ಯಾನರ್ ಹರಿದ ಪ್ರಕರಣಗಳು ಕಂಡು ಬರುತ್ತಿದ್ದು ಪೋಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬ್ಲಾಕ್ ಕಾಂಗ್ರೆಸ್ ನಾಯಕರು ತೀವ್ರ ಬೇಸರ ವ್ಯಕ್ತ ಪಡಿಸಿದರಲ್ಲದೆ ಕಾಂಗ್ರೆಸ್ ನಿಯೋಗವು ಇನ್ಸ್ಪೆಕ್ಟರ್ ಕಛೇರಿಗೆ ತೆರಳಿ ಸುಳ್ಯದ ಕೆಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ಪೂರ್ಣಗೊಳಿಸಿ ನೈಜ ಆರೋಪಿಗಳನ್ನು ಸಮಾಜಕ್ಕೆ ತಿಳಿಸಬೇಕು ಅಲ್ಲದೆ ನೈತಿಕ ಪೋಲೀಸ್ ಗಿರಿಯ ವಿರುದ್ದ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸರಕಾರ ಸೂಚಿಸಿದೆ ಅವುಗಳನ್ನು ಮಾಡಬೇಕು ಎಂದು ಪೋಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಿದರು ಎಂದು ತಿಳಿಸಿದ್ದಾರೆ .
ಭೇಟಿ ಬಳಿಕ ಎಂ ವೆಂಕಪ್ಪ ಗೌಡ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಕಾಂಗ್ರೆಸ್ ನಿಯೋಗವು ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೆವೆ ಅಲ್ಲದೆ ಬ್ಯಾನರ್ ಹರಿದ ಪ್ರಕರಣ ಶೇಕಡ 90ರಷ್ಟು ಮುಗಿದಿದೆ ಎಂದು ಹೇಳಿದ್ದರು ಇಲ್ಲಿಯ ತನಕ ಯಾಕೆ ಆರೋಪಿಗಳನ್ನು ತೋರಿಸಿ ತಿಳಿಸಿಲ್ಲ ಸಮಾಜದಲ್ಲಿ ಗೊಂದಲ ಊಹಪೋಹಗಳನ್ನು ಇಲಾಖೆಯೇ ಇತ್ಯರ್ಥ ಪಡಿಸಬೇಕಿದೆ ಎಂದು ಹೇಳಿದರು .ಅಲ್ಲದೆ ಕಳ್ಳತನ ಪ್ರಕರಣವನ್ನು ಕೂಡ ಪತ್ತೆಹಚ್ಚಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ. ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಯನ್ ಜಯಪ್ರಕಾಶ್ ರೈ , ಪಿ ಸಿ ಜಯರಾಂ ,ಎಂ ವೆಂಕಪ್ಪ ಗೌಡ , ಪಿ ಎಸ್ ಗಂಗಾಧರ , ಗೋಕುಲ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.