ಕೃಷಿ ಕಾರ್ಯಗಳಿಗಾಗಿ ಸರಕಾರ ನೀಡಿದ ಉಚಿತ ವಿದ್ಯುತ್ ನ್ನು ಗ್ರಾಹಕರೊಬ್ಬರು ಮನೆಗೆ ಮತ್ತು ಕೈಗಾರಿಕೆಗೆ ಬಳಕೆ ಮಾಡಿರುವ ಆರೋಪದಲ್ಲಿ ಮಂಗಳೂರಿನ ಮೆಸ್ಕಾಂ ಜಾಗೃತದಳ ಅಧಿಕಾರಿಗಳು (ವಿಜಿಲೆನ್ಸ್) ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಮಂಡೆಕೋಲಿನ ಕೆ.ಬಿ.ಇಬ್ರಾಹಿಂ ಎಂಬವರಿಗೆ ಕೃಷಿ ಕಾರ್ಯಕ್ಕೆ ಉಚಿತ ವಿದ್ಯುತ್ ಸೌಲಭ್ಯವಿದೆ. ಈ ಕೃಷಿ ಪಂಪ್ ನಿಂದ ವಿದ್ಯುತ್ತನ್ನು ಇಬ್ರಾಹಿಂ ರವರು ತಮ್ಮ ಮನೆ ಸೌಲಭ್ಯಕ್ಕೆ ಹಾಗೂ ಫರ್ನಿಚರ್ ತಯಾರಿಕಾ ಘಟಕಕ್ಕೆ ಬಳಸುತಿದ್ದರೆನ್ನಲಾಗಿದೆ. ಈ ಮಾಹಿತಿ ಪಡೆದ ಮೆಸ್ಕಾಂ ಜಾಗೃತದಳದ ಎ.ಇ.ಇ. ಪ್ರವೀಣ್ ಕುಮಾರ್ ನೇತೃತ್ವದ ತಂಡ ಇಂದು ಮಂಡೆಕೋಲಿನ ಇಬ್ರಾಹಿಂರ ಮನೆಗೆ ಧಾಳಿ ನಡೆಸಿ, ಅಕ್ರಮವಾಗಿ ಬಳಸುತ್ತಿದ್ದ ಸಲಕರಣೆಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದೆ.