ಕಲ್ಲುಗುಂಡಿಯಿಂದ ಗ್ರಾಹಕರೊಬ್ಬರು ಖರೀದಿಸಿದ ಸಚಿನ್ ಟ್ರೇಡಿಂಗ್ (ಜಯ) ಕಂಪೆನಿಯ ಕುಚ್ಚುಲು ಅಕ್ಕಿಯಲ್ಲಿ ಭಸ್ಮದ ಕಟ್ಟು ಕಂಡುಬಂದಿರುವ ಘಟನೆ ಜ.10 ರಂದು ನಡೆದಿದೆ.
ಕಲ್ಲುಗುಂಡಿಯ ಅಂಗಡಿಯೊಂದರಿಂದ ಚೆಂಬು ಗ್ರಾಮದ ಶಿವಪ್ರಕಾಶ್ ಎಂಬವರು ಖರೀದಿಸಿದ 25 ಕೆ.ಜಿ. ಅಕ್ಕಿಗೋಣಿಯಲ್ಲಿ ಬಿಳಿ ಬಣ್ಣದ ಭಸ್ಮ ಹಾಗೂ ಅಕ್ಕಿ ಕಂಡುಬಂದಿದೆ. ಊಟ ಮಾಡುವ ಅಕ್ಕಿಯಲ್ಲಿಯೇ ಹೀಗಾದರೇ ಬೇರೆ ಆಹಾರಗಳ ಸುರಕ್ಷತೆಗೆ ಹೇಗೆ. ಈ ಬಗ್ಗೆ ಆಹಾರ ಇಲಾಖೆ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಹಕರು ಹೇಳಿದ್ದಾರೆ.