ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಚಿರತೆ ದಾಳಿ ನಡೆಸಿ ಆಡು ಹಾಗೂ ಕರುವೊಂದು ಕೊಂದುಹಾಕಿತ್ತು. ಇದೀಗ ಆ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟು ಕಾರ್ಯಾಚರಣೆ ಆರಂಬಿಸಿದೆ. ಗೂಡಿನ ಒಳಗೆ ನಾಯಿಯನ್ನು ಕಟ್ಟಿ ಹಾಕಿ ಚಿರತೆ ಗೂಡಿನ ಒಳಗೆ ಬರುವಂತೆ ಮಾಡಿ ಬಂಧಿಸಲು ಯೋಜನೆ ಹಾಕಲಾಗಿದೆ. ಅಡ್ಕಬಳೆಯಲ್ಲಿ ಚಿರತೆ ಬಂದ ಪ್ರದೇಶದಲ್ಲಿ ನಿನ್ನೆ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪಾಸಣೆ ನಡೆಸಿ ಆ ಪ್ರದೇಶದಲ್ಲಿ ಕಬ್ಬಿಣದ ಬೋನ್ ನ್ನು ತಂದು ಅಡ್ಕಬಳೆಯಲ್ಲಿ ಇರಿಸಿದ್ದಾರೆ. ವಲಯಾರಣ್ಯಾಧಿಕಾರಿ ಮಂಜುನಾಥ್ ಮತ್ತು ಪಶುವೈದ್ಯಾಧಿಕಾರಿ ನಿತಿನ್ ಪ್ರಭು ನೇತ್ರತ್ವದಲ್ಲಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಚಿರತೆ ಹಿಡಿಯಲು ಕಾರ್ಯಚರಣೆ ಆರಂಭವಾಗಿದೆ
- Thursday
- January 30th, 2025