Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯೋಗಜಾಗೃತಿಗಾಗಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮ

 

. . . . . . .

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯಿಂದ ದಿನಾಂಕ 07-01-2024  ಭಾನುವಾರ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 ಮೊಹನ್ ರಾಮ್ ಎಸ್ ಸುಳ್ಳಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ  ಮತ್ತು ,ಗಣೇಶಪ್ರಸಾದ ಅನುಗ್ರಹ ಎಜುಕೇಶನ್ ಟ್ರಸ್ಟ್ ಸುಬ್ರºÀätå , ಯೋಗೀಶ್ ಆಚಾರ್ಯ, ಎಸ್.ಪಿ.ವೈ.ಎಸ್.ಎಸ್  ತಾಲೂಕು ಸಂಚಾಲಕರು ಪುತ್ತೂರು,  ಶ್ರೀಮತಿ ನಯನಾ ತಾಲೂಕು ಸಹ ಸಂಚಾಲಕರು ಬಂಟ್ವಾಳ,  ಆನಂದ ಕುಂಟಿನಿ ಯೋಗ  ಶಿಕ್ಷಕರು, ಉಪ್ಪಿನಂಗಡಿ,  ದೀಪ ಪ್ರಜ್ವಲನೆ ಮಾಡಿದರು.

  ಬೆಳಗ್ಗೆ 4- 30 ರಿಂದ 7 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು.

ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರದ ಮಹತ್ವವನ್ನು ಶ್ರೀಮತಿ ಮೈತ್ರಿ,  ಯೋಗ ಶಿಕ್ಷಕರು, ವಿಟ್ಲ ಶಾಖೆ ಇವರು ತಿಳಿಸಿದರು.

3 ಹಂತದಲ್ಲಿ 6 ಸುತ್ತು ಯೋಗ ಷಣ್ಮುಖ ನಮಸ್ಕಾರವು  ತಾಲೂಕು ಶಿಕ್ಷಣ ಪ್ರಮುಖರಾದ ಗಣೇಶ ಸುವರ್ಣ   ಇವರ ನೇತೃತ್ವದಲ್ಲಿ ನಡೆಯಿತು. ಮಾದುರಿ ಯೋಗ ಶಿಕ್ಷಕರು, ವಿಟ್ಲ ನಿರೂಪಣೆ ಮಾಡಿದರು. ಯೋಗ ಶಿಕ್ಷಕರಾದ ಸಂತೋಷ, ಉಪ್ಪಿನಂಗಡಿ ಶಾಖೆ , ಅಶೋಕ -ಪುತ್ತೂರು ನಗರ ಶಿಕ್ಷಣ ಪ್ರಮುಖರು, ಸುನಂದ ಶೆಟ್ಟಿ, ಸುಳ್ಯ ಶಾಖೆ ಇವರು ನಗರದ ಯೋಗಬಂಧುಗಳ ಪ್ರಾತ್ಯಕ್ಷಿಕೆಯೊಂದಿಗೆ ಯೋಗ ಷಣ್ಮುಖ ನಮಸ್ಕಾರ ಮಾಡಿಸಿದರು.   ಅಮೃತಾಸನವನ್ನು ಪುತ್ತೂರು ನಗರದ ಯೋಗಶಿಕ್ಷಕರಾದ ಕೃಷ್ಣಾನಂದ ನಾಯಕ್ ನಡೆಸಿಕೊಟ್ಟರು.

ಕಾಸರಗೋಡು, ಸುಳ್ಯ, ಮಂಗಳೂರು, ಸುರತ್ಕಲ್, ಮೂಲ್ಕಿ ಪುತ್ತೂರು, ಬಂಟ್ವಾಳ,ವಿಟ್ಲ,  ಮಂಜೇಶ್ವರ,ಪೊಳಲಿ,ಉಳ್ಳಾಲ,ಕಲ್ಲಡ್ಕದಿಂದ  ಮೂರು ಸಾವಿರಕ್ಕೂ ಹೆಚ್ಚಿನ ಯೋಗಪಟುಗಳು ಸಾರ್ವಜನಿಕರೊಂದಿಗೆ ಭಕ್ತಿಭಾವದಿಂದ  ದೇವಳದ ರಥಬೀದಿಯಲ್ಲಿ ಮುಂಜಾನೆ 4:00 ರಿಂದ ಅತ್ಯಂತ  ಶಿಸ್ತುಬದ್ಧವಾಗಿ ಸಾಲಾಗಿ  ಕುಳಿತು  ತನ್ಮಯತೆಯಿಂದ ಭಾಗವಹಿಸಿ ಕೊಂಡು ಯೋಗ ಷಣ್ಮುಖ ನಮಸ್ಕಾರ ಮಾಡಿದರು..

ಶನಿವಾರ ಸಂಜೆ ಸುರಿದ ಬಾರಿ ಮಳೆಯಿಂದ ರಥ©Ãದಿ ಸಂಪೂರ್ಣ ಸ್ವಚ್ಚವಾಗಿ ತೊಳೆದುಹೋಗಿ ಯೋಗ ಷಣ್ಮುಖ ನಮಸ್ಕಾರಕ್ಕೆ ಪ್ರಕೃತಿಯೂ ತನ್ನ ಸಹಕಾರ ನೀಡಿ ಯೋಗಪಟುಗಳನ್ನು   ಸ್ವಾಗತಿಸಿತು.

ಪ್ರಾಂತ, ವಲಯ, ಜಿಲ್ಲಾ, ತಾಲೂಕು, ನಗರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕರಾದ ಪ್ರಭಾಕರ, ಯೋಗ ಶಿಕ್ಷಕರು ಸುಬ್ರಮಣ್ಯ ಶಾಖೆ ವಂದನಾರ್ಪಣೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಆದಿತ್ಯವಾರ ಜರಗಿದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರಕ್ಕೆ ವಿವಿಧ ಜಿಲ್ಲೆಗಳಿಂದ ದಾವಣಗೆರೆ, ತುಮಕೂರು, ಹಾಸನ, ಕಾಸರಗೋಡು, ಮಂಜೇಶ್ವರ, ಬೆಂಗಳೂರು ,ಮೈಸೂರು ,ಉಡುಪಿ ಹಾಗೂ ಇತರ ಕಡೆಗಳಿಂದ ಸುಮಾರು 3000 ಯೋಗ ಬಂzsÀÄಗಳು ಆಗಮಿಸಿದ್ದರು.

Related Posts

error: Content is protected !!