Ad Widget

ಸುಳ್ಯ ಬ್ಯಾನರ್ ಹರಿದ ಪ್ರಕರಣ ರಾಮ ಭಕ್ತರು ಹಾಗೂ ಹಿಂದು ಪರ ಸಂಘಟನೆಗಳಿಂದ ಪ್ರತಿಭಟನೆ – ಪೋಲೀಸರಿಂದ ಮನವೊಲಿಕೆ ಬಳಿಕ ಪ್ರತಿಭಟನೆ ಮುಕ್ತಾಯ

ಸುಳ್ಯ ಖಾಸಗಿ ಬಸ್ಸ್ ನಿಲ್ದಾಣದ ಬಳಿಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿ ಸಂಘಟನೆಗಳು 24 ಗಂಟೆಗಳ ಗಡುವು ನೀಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತಡವಾದ ಹಿನ್ನಲೆಯಲ್ಲಿ ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು.

. . . . .

ಪೋಲಿಸ್ ನಾಯಕರು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಸಾಂಕೇತಿಕ ಪ್ರತಿಭಟನೆಗೆ ಅವಕಾಶ

ಪ್ರತಿಭಟನೆಯ ಕುರಿತು ಎಲ್ಲೆಡೆ ಮಾಹಿತಿ ಹರಡಿದ ಹಿನ್ನೆಲೆಯಲ್ಲಿ ಜನತೆ ಪ್ರತಿಭಟನಾ ಸ್ಥಳಕ್ಕೆ ದೌದಾಡಿಯಿಸುತ್ತಿದ್ದಂತೆ ಅಲ್ಲಿಗೆ ಆಗಮಿಸಿದ ಪೋಲಿಸ್ ಅಧಿಕಾರಿಗಳು ನಾಯಕರು ಮತ್ತು ಕಾರ್ಯಕರ್ತರಿಗೆ ಪ್ರತಿಭಟನೆಗೆ ಅವಕಾಶ ಪಡೆದಿದ್ದೀರಾ ಎಂದು ಕೇಳಿದರು. ಹಿಂದೂ ಸಂಘಟನೆಯ ಕಾರ್ಯಕರ್ತರು ಅಲ್ಲಿಂದ ಕದಲಲು ನಿರಾಕರಿಸಿದ ಹಿನ್ನಲೆಯಲ್ಲಿ ಸಾಂಕೇತಿಕ ಪ್ರತಿಭಟನೆಗೆ ಅವಕಾಶ ಕಲ್ಪಿಸಿ ಕೊಡಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಮಾತನಾಡುತ್ತಾ ಕರ್ನಾಟಕ ಪೋಲಿಸ್ ಇಲಾಖೆಗೆ ಅದರದ್ದೇ ಆದ ಶಕ್ತಿಯಿದೆ. ಈ ಹಿಂದೆ ಹಲವಾರು ಪ್ರಕರಣಗಳನ್ನು ಅತೀ ಶೀಘ್ರವಾಗಿ ಬಂಧಿಸಿದ್ದಾರೆ. ಅಲ್ಲದೆ ಪೋಲಿಸ್ ಇಲಾಖೆಗೆ ಕಪ್ಪು ಚುಕ್ಕೆಯು ಇದೆ ಓರ್ವ ರೈತ ಕರೆ ಮಾಡಿದ್ದಕ್ಕೆ ಬಂಧಿಸಿದ ಘಟನೆಯು ಇದೇ ತಾಲೂಕಿನಲ್ಲಿ ನಡೆದಿದೆ ಎಂದರು. ಅಲ್ಲದೇ ಪೋಲಿಸ್ ಇಲಾಖೆಯು ಇದನ್ನು ಅತೀ ತೀವ್ರವಾಗಿ ತನಿಖೆ ನಡೆಸಿ ಸುಳ್ಯದ ಹಿತ ಮತ್ತು ಶಾಂತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡುತ್ತಾ ಸುಳ್ಯದಲ್ಲಿ ಈ ಹಿಂದಿನಿಂದಲೂ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಅವುಗಳನ್ನು ಹಿಡಿದಿಲ್ಲ ಮತ್ತು ಈ ಬ್ಯಾನರ್ ಪ್ರಕರಣವು ಸೇರಿ ಎಲ್ಲ ವಿಚಾರಗಳನ್ನು ಪೋಲಿಸ್ ಅಧಿಕಾರಿಗಳು ತಕ್ಷಣವೇ ಪತ್ತೆ ಹಚ್ಚಿ ನಿಮ್ಮ ಮತ್ತು ನಮ್ಮ ತಾಲೂಕಿನ ಹೆಸರನ್ನು ಉಳಿಸಿ ಎಂದು ಹೇಳಿದರು .

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಮಾತನಾಡುತ್ತಾ ಈ ಕೃತ್ಯವನ್ನು ಯಾರು ಮಾಡಿದ್ದಾರೋ ಅವರನ್ನು ಕೂಡಲೇ ಬಂಧಿಸಿ ಇಲ್ಲವೇ ಎರಡು ಮೂರು ದಿನಗಳ ಒಳಗಾಗಿ ನಾವು ಇಡೀ ತಾಲೂಕು ಬಂದ್ ಗೆ ಕರೆ ಕೊಡುತ್ತೇವೆ ಎಂದು ಹೇಳಿದರು . ಈ ತಾಲೂಕಿನ ಇತಿಹಾಸವನ್ನು ಒಮ್ಮೆ ನೋಡಲಿ ಇದು ಹಿಂದುಗಳ ಗಟ್ಟಿಯಾಗಿರುವ, ಸಂಘಟನಾತ್ಮಕವಾಗಿರುವ ಕ್ಷೇತ್ರ. ಇಲ್ಲಿ ನಾವು ಎಲ್ಲರನ್ನು ಸಮಾನವಾಗಿ ಕಾಣುತ್ತೆವೆ ಇಲ್ಲಿ ಯಾವುದೇ ಭೇಧಭಾವಗಳು ಇಲ್ಲ ಎಂದು ಹೇಳುತ್ತಾ 1992 ಘಟನೆಯನ್ನು ಮತ್ತೆ ನೆನಪಿಸಿದರು.

ಎನ್ ಎ ರಾಮಚಂದ್ರ ಮಾತನಾಡುತ್ತಾ ನಾವು ಈ ಹಿಂದೆ ಪೋಲಿಸ್ ಠಾಣೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ ಇತಿಹಾಸವಿದೆ ಅಲ್ಲದೇ ಮಿತ್ತೂರು ನಾಯರ್ ದೈವದ ಭಂಡಾರ ಸುಳ್ಯಕ್ಕೆ ಬರುವ ಮುನ್ನ ನೈಜ ಆರೋಪಿಗಳನ್ನು ಬಂಧಿಸಿ ಎಂದು ಆಗ್ರಹಿಸಿದರು.

ಕರಸೇವೆಯ ಸಂದರ್ಭದಲ್ಲಿ ವಿಹೆಚ್ ಪಿ ಮುಖಂಡರಾಗಿದ್ದ ಜಿಜಿ ನಾಯಕ್ ಮಾತನಾಡುತ್ತಾ ಜೀವ ಇಲ್ಲದ ಬ್ಯಾನರ್ ಮೇಲೆ ಅಲ್ಲ ಜೀವ ಇರುವ ನಮ್ಮ ಮೇಲೆ ತೋರಿಸಿ ನಿಮ್ಮ ಪೌರುಷವನ್ನು ನಿಮಗೆ ತಕ್ಕ ಉತ್ತರವನ್ನು ನಾವು ನೀಡುತ್ತೆವೆ ಎಂದರು.

ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಪೋಲಿಸ್ ಅಧಿಕಾರಿಗಳು.

ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಅಲ್ಲಿಗೆ ಬಂದ ಸುಳ್ಯ ಎಸ್‌ಐ ಈರಯ್ಯ ದೂಂತೂರು ಅವರು, ಪ್ರಕರಣದ ಆರೋಪಿಯನ್ನು ಬಂಧಿಸುವ ಪ್ರಯತ್ನದಲ್ಲಿ ಇಲಾಖೆ ಇದೆ. ಸಿಸಿ ಟಿವಿ ಮೂಲಕ ಬಹುತೇಕ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಹಾಗಾಗಿ ಪ್ರತಿಭಟನೆ ನಡೆಸಬೇಡಿ. ಪ್ರತಿಭಟನೆ ನಡೆಸಲು ನೀವು ಅನುಮತಿ ಕೂಡಾ ಪಡೆದಿಲ್ಲ ಎಂದು ಹೇಳಿದಾಗ, ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು. ಆರೋಪಿಗಳ ಕುರಿತು ಮಾಹಿತಿ ಇದ್ದರೆ ಅದನ್ನು ಪ್ರತಿಕಾ ಹೇಳಿಕೆ ನೀಡಿ. ನಾವು ಪ್ರತಿಭಟನೆ ಹಿಂತೆಗೆದುಕೊಳ್ಳುತ್ತೇವೆ ಎಂದು ಲತೀಶ್ ಗುಂಡ್ಯ ಹೇಳಿದರು. ಸ್ವಲ್ಪ ಹೊತ್ತು ಅವರೊಳಗೆ ಮಾತುಕತೆ ನಡೆದ ಬಳಿಕ ಪ್ರತಿಭಟನೆ ಮುಂದುವರಿಯಿತು. ಪ್ರತಿಭಟನೆಯ ಕೊನೆಯಲ್ಲಿ ಪ್ರತಿಭಟನಾಕಾರರ ಬಳಿ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ಮೋಹನ್ ಕೊಠಾರಿ ಹಾಗೂ ಎಸ್ ಐ ಈರಯ್ಯರವರರು ಈಗಾಗಲೇ ಸಾರ್ವಜನಿಕರು ನೀಡಿದ ಮಾಹಿತಿ ಮತ್ತು ಸಿಸಿ ಟಿವಿ ಫೂಟೇಜ್‌ಗಳ ಮಾಹಿತಿಯನ್ವಯ ಆ ಸಮಯಗಳನ್ನು ಮ್ಯಾಚ್ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಶೇ.90ರಷ್ಟು ಆಗಿದೆ ಎಂದು ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು

ಪ್ರತಿಭಟನಾ ಸಭೆಯಲ್ಲಿ ಸುಭೋದ್ ಶೆಟ್ಟಿ ಮೇನಾಲ , ಅಶೋಕ್ ಅಡ್ಕಾರ್ , ಹರೀಶ್ ಉಬರಡ್ಕ , ವಿಹಿಂಪ ತಾಲೂಕು ಅಧ್ಯಕ್ಷ ಸೋಮಶೇಖರ್ ಪೈಕ,

ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ವರ್ಷಿತ್ ಚೊಕ್ಕಾಡಿ, ಹರಿಪ್ರಸಾದ್ ಎಲಿಮಲೆ, ಡಾ. ಮನೋಜ್ ಅಡ್ಡಂತಡ್ಕ, ಶಶಿಕಲಾ ನೀರಬಿದಿರೆ, ಚಂದ್ರಶೇಖರ ಅಡ್ಪಂಗಾಯ, ಸುನಿಲ್ ಕೇರ್ಪಳ, ಕೇಶವ ನಾಯಕ್ ಸುಳ್ಯ ಪ್ರಬೋದ್ ಶೆಟ್ಟಿ ಮೇನಾಲ,
ಸನತ್ ಚೊಕ್ಕಾಡಿ, ನಿಕೇಶ್ ಉಬರಡ್ಕ, ಚಿದಾನಂದ ವಿದ್ಯಾನಗರ, ಚನಿಯ ಕಲ್ತಡ್ಕ, ಬಾಲಗೋಪಾಲ‌ ಸೇರ್ಕಜೆ, ಕಿಶೋರಿ ಶೇಟ್, ಅರುಣ್ ಕುರುಂಜಿ, ಪೂಜಿತಾ ಕೇರ್ಪಳ, ನವೀನ್ ಎಲಿಮಲೆ, ಪ್ರವೀಣ ರಾವ್, ಗುರುದತ್ ಶೇಟ್, ಗಿರೀಶ್ ಕಲ್ಲಗದ್ದೆ , ಗಿರಿಧರ ನಾರಾಲು, ನವೀನ್

ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!