ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಆಟೋ ಚಾಲಕ ಮಾಲಕರು ಸುಳ್ಯ ಜಾತ್ರೋತ್ಸವ , ಅಯೋಧ್ಯೆ ರಾಮ ಮಂದಿರ ಮತ್ತು ಬೆಳ್ಳಿ ಹಬ್ಬ ಸಂಬ್ರಮದ ಶುಭಕೋರುವ ಬ್ಯಾನರ್ ಕೆಲ ದಿನಗಳ ಹಿಂದೆ ಅಳವಡಿಸಲಾಗಿತ್ತು ಆದರೆ ಇಂದು ಮುಂಜಾನೆ ನೋಡಿದಾಗ ಅಲ್ಲಿನ ಬ್ಯಾನರ್ ನಲ್ಲಿ ರಾಮ ಮಂದಿರದ ಚಿತ್ರವಿರುವ ಸ್ಥಳವನ್ನು ಮಾತ್ರ ಹರಿದು ಹಾಕಲಾಗಿದ್ದು
ಇದೀಗ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಠೀಕೆ ವ್ಯಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಪೋಲಿಸ್ ದೌದಾಡಿಯಿಸಿದ್ದು ಇದೀಗ ಹರಿದ ಬ್ಯಾನರ್ ತೆರವುಗೊಳಿಸಲಾಗುತ್ತಿದ್ದು ಅಲ್ಲದೆ ದೂರು ಕೊಡಲು ತೀರ್ಮಾನಿಸುರುವುದಾಗಿ ಅಟೋ ಚಾಲಕರ ಸಂಘದ ಅಧ್ಯಕ್ಷರಾದ ರಾಧಕೃಷ್ಣ ಬೈತಡ್ಕ ತಿಳಿಸಿದ್ದಾರೆ.