ಸೈಂ ಟ್ ಮೇರಿಸ್ ಚರ್ಚ್ ಗುತ್ತಿಗಾರು, ಹಾಗೂ ಬೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು ,ಕೆ.ಎಸ್.ಎಂ.ಸಿ.ಎ. ಗುತ್ತಿಗಾರು ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ,’ಕರ್ನಾಟಕ ಸಂಭ್ರಮ ೫೦’ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಹಾಗೂ ಬೆಳ್ತಂಗಡಿ ಧರ್ಮ ಪ್ರಾಂತ್ಯದ ರಜತ ಮಹೋತ್ಸವ ಪ್ರಯುಕ್ತ ಸುಳ್ಯ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಕನ್ನಡ ನಾಡ ಗೀತೆ ಸ್ಪರ್ಧೆಯು ಡಿಸೆಂಬರ್ 5 ರಂದು ಬೆಸ್ಡ್ ಕುರಿಯಾಕೋಸ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ರವರು ಉದ್ಘಾಟಿಸಿ “ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುವ ಮೂಲಕ ಕನ್ನಡವನ್ನು ಬೆಳೆಸಬೇಕು, ಕನ್ನಡವನ್ನು ಪ್ರೀತಿಸಿ,ಉಳಿಸಿ, ಬೆಳೆಸಬೇಕು ಎಂದು ಸಂದೇಶವನ್ನು ಸಾರಿದ್ದಾರೆ.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಸೈಂಟ್ ಮೇರಿಸ್ ಚರ್ಚ್ ನ ಧರ್ಮ ಗುರುಗಳಾದ ಫಾದರ್ ಆದರ್ಶ ಜೋಸೆಫ್ ರವರು ಕನ್ನಡ ನಾಡಿನ ಸೌಂದರ್ಯ,ಕನ್ನಡ ಭಾಷೆಯ ಸೊಬಗು, ಕರ್ನಾಟಕದ ವೈಶಿಷ್ಟ್ಯತೆಯ ಬಗ್ಗೆ ವಿವರಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು ಮುಖ್ಯಅತಿಥಿಯಾಗಿ ಆಗಮಿಸಿದ ಎಸ್.ಎಸ್.ಪಿ. ಯು ಕಾಲೇಜು ಸುಬ್ರಹ್ಮಣ್ಯದ ಕನ್ನಡ ಮತ್ತು ಸಂಸ್ಕೃತ ಉಪನ್ಯಾಸಕರಾದ ರಘು. ಬಿಜೂರ್ ಕನ್ನಡ ಭಾಷೆ ಬೆಳೆದು ಬಂದ ರೀತಿಯ ಬಗ್ಗೆ ಮಾತನಾಡಿದರು, ಅತಿಥಿಯಾಗಿ ಆಗಮಿಸಿದ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಮಾತಾಡಿ ಎಲ್ಲಾ ಭಾಷೆಯನ್ನು ಪ್ರೀತಿಸಿ, ನಮ್ಮ ಸಂಸ್ಕೃತಿ ಭಾಷೆಯಾಗಿ ಕನ್ನಡವನ್ನು ಉಳಿಸಿಕೊಳ್ಳಿ ಎಂದು ಮಾತಾನಾಡಿದರು.ಕಾರ್ಯಕ್ರಮದಲ್ಲಿ ಸೈಂಟ್ ಮೇರಿಸ್ ಚರ್ಚ್ ನ ಟ್ರಸ್ಟಿಗಳಾದ ಟಿಜಿ.ಪಿ ಎಫ್. ಮತ್ತು ಸೈಜು .ಸಿ.ಪಿ.ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ರಾದ ಲಿಜೋ ಜೋಸ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಕೆ ಎಸ್. ಎಂ. ಸಿ.ಎ. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ ಸ್ವಾಗತಿಸಿ,ಬೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢಾಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಟೀಸಾ ಜಾನ್ ರವರು
ವಂದಿಸಿ, ಪ್ರೌಢ ಶಾಲಾ ವಿಭಾಗದ ಕನ್ನಡ ಶಿಕ್ಷಕಿ ಶಾಂತಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಪ್ರಥಮ ಬಹುಮಾನ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನ ,ವ್ಯಯಕ್ತಿಕ ಟ್ರೋಫಿ ,ಸ್ಮರಣಿಕೆಯನ್ನು ಕೆ.ಪಿ.ಯಸ್ ಬೆಳ್ಳಾರೆ ಪಡೆದುಕೊಂಡು, ದ್ವಿತೀಯ ಬಹುಮಾನ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ,ವ್ಯೆಯಕ್ತಿಕ ಟ್ರೋಫಿ, ಸ್ಮರಣಿಕೆ, ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು,
ತೃತೀಯಾ ಬಹುಮಾನವನ್ನು ಸರಕಾರಿ ಪ್ರೌಢ ಶಾಲೆ ಮರ್ಕಂಜ ಏಳು ಸಾವಿರ ರೂಪಾಯಿ ನಗದು ಬಹುಮಾನ,ವ್ಯಯಕ್ತಿಕ ಟ್ರೋಪಿ ,ಸ್ಮರಣಿಕೆ ಯನ್ನು ಪಡೆದುಕೊಂದಿದೆ.ತಾಲೂಕಿನ ಹನ್ನೊಂದು ಶಾಲೆಗಳಿಂದ 110 ವಿದ್ಯಾರ್ಥಿಗಳು ಭಾಗವಹಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಲಘು ಉಪಹಾರವನ್ನು ನೀಡಿ ಗೌರವಿಸಲಾಯಿತು.