ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಇರ್ಷಾದ್ ಹಾಗೂ ಪುತ್ತೂರು ನಿವಾಸಿ ಕಿಶೋರ್ ಎಂಬವರು ಪಾಲುದಾರಿಕೆಯಲ್ಲಿ 2023 ರಲ್ಲಿ KL : 04 – Y – 9604 ನೇ ಟಿಪ್ಪರನ್ನು ಖರೀದಿಸಿದ್ದರು ದಿನಾಂಕ 31.12.2023 ರಂದು ರಾತ್ರಿ ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಕಜೆ ಎಂಬಲ್ಲಿ ಕೆಲಸ ಮುಗಿಸಿದ ಬಳಿಕ ಟಿಪ್ಪರನ್ನು ನಿಲ್ಲಿಸಿ ಹೋಗಿರುತ್ತಾರೆ . ಮರುದಿನ ದಿನಾಂಕ 01.01.2024 ರಂದು ಬೆಳಿಗ್ಗೆ ದೂರದಾರರು ಸ್ಥಳಕ್ಕೆ ಬಂದು ನೋಡಲಾದಗ ಟಿಪ್ಪರ್ನಲ್ಲಿದ್ದ ರೂ . 15000 / -ಅಂದಾಜು ಮೌಲ್ಯದ ಅಮೋನ್ ಕಂಪೆನಿಯ 1 ಬ್ಯಾಟರಿ ಕಾಣದಿರುವುದಾಗಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:01/2024 ಕಲಂ 379.IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Monday
- November 25th, 2024