Ad Widget

ಅಮರ ಸಂಘಟನಾ ಸಮಿತಿ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಹಾಗೂ 2023 – 24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಅಧ್ಯಕ್ಷರಾದ ಪ್ರವೀಣ್ ಕುಲಾಲ್ ಅವರ ನೇತೃತ್ವದಲ್ಲಿ ಕುಕ್ಕುಜಡ್ಕದ “ಕೊರಗಭವನ”ದಲ್ಲಿ ಡಿ. 3 ರಂದು ನಡೆಯಿತು.
ಸಮಿತಿಯ ಖಜಾಂಜಿಯವರಾದ ರಜನಿಕಾಂತ್ ಉಮ್ಮಡ್ಕ ಇವರು 2022 23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮಗಳ ವಿವರ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು. ಈ ಅವಧಿಯಲ್ಲಿ 15 ಕಾರ್ಯಕ್ರಮಗಳು ಸಂಘದ ಮೂಲಕ ನಡೆದಿರುವುದು ಸಮಿತಿಯ ಹೆಗ್ಗಳಿಕೆಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಸಂಘದ ಅಧ್ಯಕ್ಷರಾದ ಪ್ರವೀಣ್ ಕುಲಾಲ್ ರವರು ಮೆಚ್ಚುಗೆ ವಹಿಸಿ, ಸಹಕರಿಸಿದ ಎಲ್ಲಾ ಸಮಿತಿಯ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು. ಸಮಿತಿಯ 2023-24 ನೇ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಸಾತ್ವಿಕ್ ಮಡಪ್ಪಾಡಿ ಇವರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಿಥುನ್ ಕೆರೆಗದ್ದೆ, ಸಂಘದ ಕಾರ್ಯದರ್ಶಿಯಾಗಿ ಜಯಪ್ರಸಾದ್ ಸಂಕೇಶ, ಜತೆ ಕಾರ್ಯದರ್ಶಿಯಾಗಿ ಹಸ್ತವಿ ಮಡಪ್ಪಾಡಿ ಹಾಗೂ ಖಜಾಂಜಿಯಾಗಿ ಸೋಮಶೇಖರ ದೇವ ಇವರುಗಳನ್ನು ಆಯ್ಕೆ ಮಾಡಲಾಯಿತು. ಇವರೊಂದಿಗೆ ಪ್ರದೀಪ್ ಬೊಳ್ಳೂರು, ಹರ್ಷಿತ್ ದಾತಡ್ಕ, ರಜನಿಕಾಂತ್ ಉಮ್ಮಡ್ಕ, ಪ್ರವೀಣ್ ಕುಮಾರ್, ಕುಸುಮಾಧರ ಮುಕ್ಕೂರು, ಶಶಿಕಾಂತ್ ಮಿತ್ತೂರು, ಪ್ರಸಾದ್ ಬೊಳ್ಳೂರು, ಪ್ರಸಾದ್ ಕೆ ಹೆಚ್, ಶಿವಪ್ರಸಾದ್ ದೊಡ್ಡಿಹಿತ್ಲು, ಅನಿತಾ ಕುಕ್ಕುಜಡ್ಕ, ಹಿತೇಶ್ ನಾರ್ಕೋಡು, ಕೀರ್ತನ್ ಪಾರೆ, ಧನ್ಯ ರಾಜ್ ಪಿ ಟಿ, ಪ್ರಭಾಕರನ್ ಪೈಲಾರು, ಪ್ರಶಾಂತ್ ಕುಮಾರ್ ಕುದ್ಮಾರು, ಸ್ವಾತಿ ಪದವು, ಮಿಥುನ್ ಪೈಲಾರು ಹಾಗೂ ಮನೀಶ್ ಕಡಪಳ ಇವರುಗಳನ್ನು ಸಂಘದ ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು. ಹಸ್ತವಿ ಮಡಪ್ಪಾಡಿ ಸ್ವಾಗತಿಸಿ, ಹರ್ಷಿತ್ ದಾತಡ್ಕ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading