Ad Widget

ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ : ಮಾನಸಿಕ ಒತ್ತಡ ನಿರ್ವಹಣೆ ಅತ್ಯಗತ್ಯ – ಡಾ. ಆನಂದ್

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆ ಇದರ ವತಿಯಿಂದ ದ.ಕ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಇದರ ಸಹಕಾರದೊಂದಿಗೆ, ನೇತ್ರಾವತಿ ಸಭಾಂಗಣ, ಜಿಲ್ಲಾ ಪಂಚಾಯತ್ ಕೊಟ್ಟಾರ, ಮಂಗಳೂರು ಇಲ್ಲಿ  ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ಹಾಗೂ ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ, ಇಸಿಜಿ, ಕಣ್ಣಿನ ತಪಾಸಣೆಯನ್ನು ದಿನಾಂಕ: 24-08-2023ನೇ ಗುರುವಾರದಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗಿರುತ್ತದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಕಾರ್ಯನಿರ್ವಾಹಣಾಧಿಕಾರಿ ಡಾ|ಆನಂದ್ ಕೆ, IAS  ಅವರು ನೆರವೇರಿಸಿ, ಮಾತನಾಡಿ ಗೃಹರಕ್ಷಕ ದಳ ಇಲಾಖೆಯಲ್ಲಿ ಒಂದು ಸಾವಿರ ಸಂಖ್ಯಾ ಬಲವಿದ್ದು, ಬೇರೆ ಬೇರೆ ಇಲಾಖೆಗಳಲ್ಲಿ ಪ್ರಮುಖವಾಗಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಜೈಲ್ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವುದು ತುಂಬಾ ಕಷ್ಟ. ಅದನ್ನು ಗುರುತಿಸಬೇಕಾದರೆ ಅದನ್ನು ಒಂದು ತರಬೇತಿ ಮುಖಾಂತರ ಯಾರಿಗೆ ಒತ್ತಡ ಆಗಿರಬಹುದು ಅಥವಾ ನಮಗೆ ಅದು ಬಂದಿದೆಯೋ ಇಲ್ಲವೊ ಎಂದು ಕಂಡುಹಿಡಿಯಲು ಗೊತ್ತಾಗುವುದಿಲ್ಲ. ಯಾವಾಗ ನಾವು ವೈದ್ಯಾಧಿಕಾರಿಗಳ ಬಳಿ ಹೋಗಿ ಕೌನ್ಸಿಲಿಂಗ್ ಅನ್ನು ಯಾವಾಗ ಮಾಡಬೇಕು ಹೇಗೆ ಮಾಡಬೇಕು ಎಂಬ ತಿಳಿವಳಿಕೆ ಇಲ್ಲ ಅಂದರೆ ನಿದ್ರಾಹೀನತೆಯಾಗಿ ಊಟದ ಸಮಸ್ಯೆ, ತೂಕ ಕಡಿಮೆ ಆಗುತ್ತದೆ, ಜನರ ಜೊತೆ ಸಾಮಾಜಿಕವಾಗಿ ಹೊಂದಿಕೊಂಡು ಹೋಗುವುದು ಕಡಿಮೆ ಆಗುತ್ತದೆ ಈ ರೀತಿಯಾದಂತ ಸಾಕಷ್ಟು ಪರಿಣಾಮಗಳು ಮಾನಸಿಕ ರೋಗವಾಗಿ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಇರುತ್ತದೆ. ಇದು ಬರದಂತೆ ಹೇಗೆ ನೋಡಿಕೊಳ್ಳುವುದು, ಯಾವ ರೀತಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ, ಡಾ| ಕಿಶೋರ್ ಕುಮಾರ್ ಅವರು ಮಾತನಾಡಿ, ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯದ ತರಬೇತಿ ಕಾರಗಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುತ್ತೇವೆ. ಗೃಹರಕ್ಷಕರು ತುಂಬಾ ವರ್ಷಗಳಿಂದ ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ, ಸಹಜವಾಗಿ ಕೆಲಸದ ಒತ್ತಡ ಅಥವಾ ವಯಕ್ತಿಕ  ಜೀವನದ ಒತ್ತಡ ಇರಬಹುದು ಇದನ್ನು ನಿರ್ವಹಣೆಮಾಡುವಂತಹದು ಜೊತೆಗೆ ಇದರೊಂದಿಗೆ ಬರುವ ಕಾಯಿಲೆಗಳಾದ ಮದುಮೇಹ, ರಕ್ತದೊತ್ತಡ, ಮಾನಸಿಕ ಉದ್ವಿಘ್ನತೆ, ಇವೆಲ್ಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ತರಬೇತಿ ಪ್ರಮುಖ ಪಾತ್ರವಹಿಸುತ್ತದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಇದರ ಜೊತೆಗೆ ಮಾದಕ ದ್ರವ್ಯ ಜಾಗೃತಿ ಕಾರ್ಯಗಾರದ ಮಾಹಿತಿಯನ್ನೂ ನೀಡುತ್ತೇವೆ. ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳಿಗೆ ಯಾರೆಲ್ಲ ಒಳಗಾಗಿರುತ್ತಾರೆ ಅಂತವರನ್ನು ಗುರುತಿಸಿ ಅವರಿಗೆ ಉಚಿತವಾದ ಚಿಕಿತ್ಸೆ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ನಾವು ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವಂತ ದೃಷ್ಟಿಯಿಂದ ಈ ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ನಡೆಯುತ್ತಿದೆ. ಎಲ್ಲರೂ ಈ ತರಬೇತಿ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮನೋರೋಗ ತಜ್ಞರಾದ ಡಾ| ಸುಪ್ರಿತಾ, ಅವರು ಮಾನಸಿಕ ಆರೋಗ್ಯದ ಬಗ್ಗೆ ತರಬೆತಿ ನೀಡಿದರು. ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ|ರಾಹುಲ್ ರಾವ್ ಅವರು  ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ತರಬೇತಿ ನೀಡಿದರು ಹಾಗೂ ಮನಶಾಂತಿ ಚಿಕಿತ್ಸಾಲಯದ ಮಾನಸಿಕ ಆರೋಗ್ಯದ ವೈದ್ಯರಾದ ಡಾ|ರಮೀಳಾ ಶೇಖರ್ ಅವರು ಒತ್ತಡ ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಾ| ಪದ್ಮನಾಭ ಕಾಮತ್, ಹೃದಯ ತಜ್ಞರು, ಡಾ| ಸುದರ್ಶನ್ ಸಿ.ಎಂ, ಜಿಲ್ಲಾ ಲೆಪ್ರಸಿ ಅಧಿಕಾರಿ ಮತ್ತು ಮಾನಸಿಕ ಆರೋಗ್ಯ ಅಧಿಕಾರಿಗಳು ಗೌರವ ಉಪಸ್ಥಿತರಿದ್ದರು.  ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಅವರು ಸ್ವಾಗತ ಭಾಷಣ ಮಾಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ| ಸುಜಯ್ ಭಂಡಾರಿ ಅವರು ಈ ಕಾರ್ಯಗಾರದ ಉಸ್ತುವಾರಿಯನ್ನು ವಹಿಸಿದ್ದರು. ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್ ಅವರು ವಂದನಾರ್ಪಣೆ ಮಾಡಿದರು. ಮಂಗಳಾ ಪ್ಯಾರಾ ಮೆಡಿಕಲ್ ಕಾಲೇಜು ಸಿಬ್ಬಂದಿ ಗಳು ಕಣ್ಣು ಪರೀಕ್ಷೆ ನಡೆಸಿಕೊಟ್ಟರು.  10 ಮಂದಿ  ಸರ್ಕಾರಿ ಶುಶ್ರೂಷಕಿಯರು ಈ ತರಬೇತಿಯಲ್ಲಿ ಉಪಸ್ಥಿತರಿದ್ದರು ಹಾಗೂ ಗೃಹರಕ್ಷಕರಿಗೆ ಉಚಿತ ಮಧುಮೇಹ, ರಕ್ತದೊತ್ತಡ, ಕಣ್ಣಿನ ತಪಾಸಣೆಗಳನ್ನು ಮಾಡಿದರು.
ಈ ಕಾರ್ಯಗಾರದಲ್ಲಿ 15 ಘಟಕಗಳಿಂದ ಸುಮಾರು 150 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading