Ad Widget

ಕಂಡದ ಗೌಜಿ ಕಾರ್ಯಕ್ರಮ ನಡೆದ ಗದ್ದೆಯಲ್ಲಿ ಭತ್ತದ ನಾಟಿ – ಗದ್ದೆಗಿಳಿದು ನಾಟಿ ಮಾಡಿ ವಿದ್ಯಾರ್ಥಿಗಳು

ಗ್ರಾಮ ಪಂಚಾಯತ್ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ, ಸರಕಾರಿ ಪ್ರೌಢಶಾಲೆ ಅಜ್ಜಾವರ, ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ , ಓಂ ಫ್ರೆಂಡ್ಸ್ ಅಜ್ಜಾವರ ಇದರ ಜಂಟಿ ಆಶ್ರಯದಲ್ಲಿ  ಹಡೀಲು ಬಿದ್ದಿರುವ ಗದ್ದೆಯಲ್ಲಿ ಯಾಂತ್ರಿಕೃತ  ಭತ್ತದ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಅಜ್ಜಾವರದ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ನಡೆಯಿತು. ಸುಮಾರು 1.05...

ಪಂಜ: ಸ್ಕೌಟ್ ಗೈಡ್ ಪಟಾಲಂ ನಾಯಕರ ಶಿಬಿರ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವತಿಯಿಂದ ಶಾಲಾ ಶಿಕ್ಷಣ ಇಲಾಖೆ, ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ ಸಹಯೋಗದಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ ಗೈಡ್ ದಳಗಳ ಪಟಾಲಂ ನಾಯಕರ ಎರಡು ದಿನಗಳ ತರಬೇತಿ ಶಿಬಿರವು ಆಗಸ್ಟ್ 04 ಮತ್ತು 05ರಂದು...
Ad Widget

ಐವರ್ನಾಡು ಗ್ರಾ.ಪಂ. ಅಧ್ಯಕ್ಷರಾಗಿ ಲೀಲಾವತಿ ಕುತ್ಯಾಡಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಕೀಲಾಡಿ ಅವಿರೋಧ ಆಯ್ಕೆ

ಐವರ್ನಾಡು ಗ್ರಾಮ ಪಂಚಾಯತು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆ.08 ರಂದು ನಡೆದಿದ್ದು ಅಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಕುತ್ಯಾಡಿ ಹಾಗೂ ಉಪಾಧ್ಯಕ್ಷರಾಗಿ ಬಾಲಕೃಷ್ಣ ಕೀಲಾಡಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಬಾಲಕೃಷ್ಣ ಕೀಲಾಡಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್ ಆರ್ .ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಗ್ರಾಮ ಪಂಚಾಯತ್ ಅಭಿವೃದ್ಧಿ...

ಮುರುಳ್ಯ ಗ್ರಾ.ಪಂ. ಅಧ್ಯಕ್ಷರಾಗಿ ವನಿತಾ ಸುವರ್ಣ, ಉಪಾಧ್ಯಕ್ಷರಾಗಿ ಕು. ಜಾನಕಿ ಮುರುಳ್ಯ ಅವಿರೋಧ ಆಯ್ಕೆ

ಮುರುಳ್ಯ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ವನಿತಾ ಸುವರ್ಣ, ಉಪಾಧ್ಯಕ್ಷರಾಗಿ ಕು. ಜಾನಕಿ ಮುರುಳ್ಯ ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ವನಿತಾ ಸುವರ್ಣರು ಈ ಬಾರಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷತೆಗೆ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜಾನಕಿ ಮುರುಳ್ಯ ನಾಮಪತ್ರ ಸಲ್ಲಿಸಿದ್ದು, ಇಬ್ಬರೂ ಅವಿರೋಧ ಆಯ್ಕೆಯಾದರು.ಚುನಾವಣಾಧಿಕಾಧಿಕಾರಿಯಾಗಿ ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ್ ಆಗಮಿಸಿದ್ದರು.

ದೊಡ್ಡೇರಿ ಶಾಲೆಯ ಅವ್ಯವಸ್ಥೆ ಬಗ್ಗೆ ಅಮರ ಸುದ್ದಿ ಮಾಡಿದ್ದ ವರದಿ ಪ್ರತಿಧ್ವನಿ – ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಬೇಕಾದ ಅಧಿಕಾರಿ ಗೈರು ಹಿನ್ನಲೆ ಗ್ರಾಮ ಸಭೆ ಮುಂದೂಡಿಕೆ

ಅಜ್ಜಾವರ ಗ್ರಾಮ ಪಂಚಾಯತ್ ನ ಗ್ರಾಮಸಭೆ ಆ.8ರಂದು ನಿಗದಿಯಾಗಿತ್ತು. ಅಂದೇ ಮಂಡೆಕೋಲು ಗ್ರಾಮಸಭೆ ಕೂಡ ನಿಗದಿಯಾಗಿತ್ತು.ಗ್ರಾಮ ಸಭೆಗೆ ಅಧಿಕಾರಿಗಳು ಬಾರದಿರುವ ಹಿನ್ನಲೆಯಲ್ಲಿ ಗ್ರಾಮ ಸಭೆಯನ್ನು ರದ್ದು ಪಡಿಸಬೇಕಾದ ಅನಿವಾರ್ಯ ಎದುರಾದ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ನೋಡೆಲ್ ಅಧಿಕಾರಿ ಶೀತಲ್ ಅವರು ಮುಂದೂಡುವುದಾಗಿ ಘೋಷಿಸಿದರು. ಗ್ರಾಮ ಸಭೆ ಆರಂಭವಾದೊಡನೆ ಅಧಿಕಾರಿಗಳು ಬಾರದಿದ್ದರೇ ಗ್ರಾಮ ಸಭೆ ಮಾಡುವುದು ಬೇಡವೆಂದು ಗ್ರಾಮಸ್ಥರು...

ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷೆಯಾಗಿ ಜಾನಕಿ ಕಂದಡ್ಕ, ಉಪಾಧ್ಯಕ್ಷೆಯಾಗಿ ಭುವನೇಶ್ವರಿ ಪದವು

ಅಮರಮುಡ್ನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ.8ರಂದು ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳಾದ ಶ್ರೀಮತಿ ಜಾನಕಿ ಮತ್ತು ಶ್ರೀಮತಿ ಮೀನಾಕ್ಷಿ ಚೂಂತಾರು ಸ್ಪರ್ಧಿಸಿದ್ದು, ಜಾನಕಿ ಕಂದಡ್ಕರವರು 13 ಮತಗಳನ್ನು ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾದರು. ಮೀನಾಕ್ಷಿ ಚೂಂತಾರು 3 ಮತಗಳನ್ನು ಪಡೆದರು. ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಅಶೋಕ್ ಚೂಂತಾರು, ಭುವನೇಶ್ವರಿ ನಾಮಪತ್ರ...

ಬೆಳ್ಳಾರೆ : ಗ್ರಾ.ಪಂ. ಅಧ್ಯಕ್ಷರಾಗಿ ನಮಿತಾ ರೈ – ಉಪಾಧ್ಯಕ್ಷರಾಗಿ ಶ್ರೀಮತಿ ವೀಣಾ

ಬೆಳ್ಳಾರೆ ಗ್ರಾಮ ಪಂಚಾಯತ್ ನ 2 ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ನಮಿತಾ ಕೆ ಎಲ್ ರೈ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ವೀಣಾರವರು ಆಯ್ಕೆಯಾಗಿರುತ್ತಾರೆ.

ಕೊಲ್ಲಮೊಗ್ರ : ಅಧ್ಯಕ್ಷರಾಗಿ ಜಯಶ್ರೀ ಚಾಂತಾಳ – ಉಪಾಧ್ಯಕ್ಷರಾಗಿ ಅಶ್ವಥ್ ಯಾಲದಾಳು

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಿತು. ಅಧ್ಯಕ್ಷರಾಗಿ ಜಯಶ್ರೀ ಚಾಂತಾಳ ಹಾಗೂ ಉಪಾಧ್ಯಕ್ಷರಾಗಿ ಅಶ್ವಥ್ ಯಾಲದಾಳು ಅವಿರೋಧವಾಗಿ ಆಯ್ಕೆಯಾದರು.

ಸೌಜನ್ಯ ಪರ ಬೃಹತ್ ವಾಹನ ಜಾಥಕ್ಕೆ ಕ್ಷಣಗಣನೆ, ಕಿಕ್ಕಿರಿದು ಸೇರಿದ ಯುವ ಸಮೂಹ

ಬೆಳ್ತಂಗಡಿ ತಾಲೂಕಿನಲ್ಲಿ ಹನ್ನೊಂದು ವರ್ಷಗಳ ಹಿಂದೆ ಭೀಕರವಾಗಿ ಅತ್ಯಾಚಾರವಾಗಿ ಸಾವನ್ನಪ್ಪಿದ್ದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಮುತ್ತು ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಆಗ್ರಹಿಸಿ ಇಂದು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ಕುಟುಂಬಸ್ಥರ ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರಿಂದ ವಾಹನ ಜಾಥಕ್ಕೆ ಇದೀಗ ಕ್ಷಣಗಣನೆ ಪ್ರಾರಂಭವಾಗಿದ್ದು ಕೆಲ ನಿಮಿಷಗಳಲ್ಲಿ ಸಾವಿರಾರು...

ಸೌಜನ್ಯಳ ಪರ ನ್ಯಾಯಕ್ಕಾಗಿ ಧರ್ಮಯುದ್ಧ – ರಾಜಕೀಯ ರಹಿತ ಹೋರಾಟಕ್ಕೆ ಸಾಕ್ಷಿಯಾಗಲಿದೆ ಸುಳ್ಯ – ಇಂದು ನಿಂತಿಕಲ್ಲಿನಿಂದ ಸುಳ್ಯಕ್ಕೆ ಜಾಥಾ – ಬೃಹತ್ ಪ್ರತಿಭಟನೆ

ಸುಮಾರು 11 ವರ್ಷಗಳ ಹಿಂದೆ ಧರ್ಮಸ್ಥಳ ಸಮೀಪ ಸೌಜನ್ಯಳನ್ನು  ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ನೈಜ ಆರೋಪಗಳನ್ನು ಶಿಕ್ಷೆಕೆ ಒಳಪಡಿಸಬೇಕು,ಸೌಜನ್ಯಳ ಸಾವಿಗೆ ನ್ಯಾಯ ಒದಗಿಸಬೇಕು ಎಂಬ ಕೂಗು ರಾಜ್ಯದಾದ್ಯಂತ ಕೇಳಿ ಬರುತ್ತಿದೆ. ಈ ಹೋರಾಟದ ಭಾಗವಾಗಿ ಸುಳ್ಯದಲ್ಲಿ ಆ. 8ರಂದು ಸುಳ್ಯದ ನಿಂತಿಕಲ್ಲಿನಿಂದ ಸುಳ್ಯ ನಗರದವರೆಗೆ ವಾಹನ ಜಾಥಾ, ಪೈಚಾರಿನಿಂದ ಕಾಲ್ನಡಿಗೆ ಜಾಥಾ  ...
Loading posts...

All posts loaded

No more posts

error: Content is protected !!