Ad Widget

ಬೆಳೆ ವಿಮೆ ಪಾವತಿಗೆ ಅವಧಿ ವಿಸ್ತರಣೆ

ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮವನ್ನು 2023ರ ಮುಂಗಾರು ಹಂಗಾಮಿಗೆ ಅನ್ವಯಿಸಿ ವಿಮೆ ಪಾವತಿಸಲು ಆಗಸ್ಟ್ 7 ರ ವರೆಗೆ ಅವಕಾಶ ‌ನೀಡಲಾಗಿದೆ ಎಂದು ಸುಳ್ಯ ತೋಟಗಾರಿಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ...

ಮಳೆ‌ ರಜೆ‌ ಸರಿದೂಗಿಸಲು ಶನಿವಾರ ಪೂರ್ಣ ದಿನ ಶಾಲೆ – ಆದೇಶ ಹಿಂಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ

ಮಳೆ ಕಾರಣ ನೀಡಲಾಗಿದ್ದ ರಜೆ ಸರಿದೂಗಿಸಲು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶನಿವಾರ ಪೂರ್ತಿ ದಿನ ಶಾಲೆ ನಡೆಸುವ ಕುರಿತು ಹೊರಡಿಸಿರುವ ಆದೇಶ ಹಿಂಪಡೆಯಲಾಗಿದೆ ಎಂದು‌ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್ ತಿಳಿಸಿದ್ದಾರೆ. ಮಳೆ‌ಯ‌ ಸಂದರ್ಭದಲ್ಲಿ ಜಿಲ್ಲಾ ಹಂತದಿಂದ ರಜೆ ನೀಡಿರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ಮಳೆಯಾಗುವ ಸಂದರ್ಭಗಳು ಇರುವುದರಿಂದ ಮಳೆ ಸಂದರ್ಭದಲ್ಲಿ ನೀಡಿರುವ ರಜೆಯನ್ನು ತರಗತಿ ನಡೆಸಿ...
Ad Widget

ಸುಬ್ರಹ್ಮಣ್ಯಕ್ಕೆ ಬಂದ ತಾಯಿ, ಮಗ ಕಾಣೆ – ಗಂಡನಿಂದ ದೂರು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ  ತಾಯಿ, ಮಗ ಕಾಣೆ ಕಾಣೆಯಾದ ಘಟನೆ ಜು.31 ವರದಿಯಾಗಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಗಂಡ ದೂರು ನೀಡಿದ ಘಟನೆ ವರದಿಯಾಗಿದೆ. ಸುಬ್ರಹ್ಮಣ್ಯ ಠಾಣೆಗೆ ಆ.1 ರಂದು ದೂರು ನೀಡಿರುವ ಬೆಂಗಳೂರು ಗ್ರಾಮಾಂತರದ ರಾಜಶೇಖರ್ ಅವರು ನನ್ನ ಪತ್ನಿ 28 ಪ್ರಾಯದ ಹರ್ಷಿತ ಮತ್ತು ಮೂರು ವರ್ಷ ಪ್ರಾಯದ ಭರತ್...

ಮಂಗಳೂರು : ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಶಿಲಾನ್ಯಾಸ ; ಮುಂದಿನ ಬಜೆಟ್ ನಲ್ಲಿ ಸುಬ್ರಹ್ಮಣ್ಯ ರೈಲು ನಿಲ್ದಾಣ ಅಭಿವೃದ್ಧಿ – ಸಂಸದ ನಳಿನ್

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಆ.6 ರಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಶಿಲಾನ್ಯಾಸ ಮಾಡಲಿರುವ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಚಾಲನೆ ನೀಡಲಿದ್ದಾರೆ.  ಅಂತರಾಷ್ಟ್ರೀಯ ಮಟ್ಟದ ಈ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು  ಸುಮಾರು ರೂ....

ಮಳೆ ಕಾರಣದಿಂದ ನೀಡಿದ್ದ ರಜೆ ಸರಿದೂಗಿಸಲು ಶನಿವಾರದಂದು ದಿನಪೂರ್ತಿ ತರಗತಿ

ಸುಳ್ಯದಲ್ಲಿ ಮಳೆ ಹಿನ್ನಲೆಯಲ್ಲಿ ಮಂಜಾಗೃತ ಕ್ರಮವಾಗಿ ಶಾಲೆಗಳಿಗೆ ನೀಡಿದ್ದ ರಜೆಗಳನ್ನು ಸರಿದೂಗಿಸಲು ಶನಿವಾರ ದಿನಗಳಂದು ಮಧ್ಯಾಹ್ನ ಬಳಿಕವೂ ಶಾಲೆಯಲ್ಲಿ ಪಾಠ ನಡೆಸುವುದರ ಮೂಲಕ ರಜಾ ಸಮಯವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಈ ಬಗ್ಗೆ ವೇಳಾ ಪಟ್ಟಿ ಪ್ರಕಟಿಸಿದೆ. ಒಂದು ದಿನದ ರಜೆಗೆ ಎರಡು ಶನಿವಾರಗಳಂದು ಶಾಲೆ ನಡೆಸಿ ಸರಿದೂಗಿಸಲು ನಿರ್ಧಾರ ಮಾಡಲಾಗಿದ್ದುವೇಳಾ ಪಟ್ಟಿ ಹೊರಡಿಸಿದೆ....

ಕೇರಂ ಪಂದ್ಯಾಟ: ಕನಕಮಜಲು ತಂಡಕ್ಕೆ ಸಮಗ್ರ ಪ್ರಶಸ್ತಿ

ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಮುಕ್ತ ಕೇರಂ ಪಂದ್ಯಾಟದಲ್ಲಿ ಕನಕಮಜಲು ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.ಸಿಂಗಲ್ಸ್ ವಿಭಾಗದಲ್ಲಿ ಚಂದ್ರಶೇಖರ ಕನಕಮಜಲು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ,ಡಬಲ್ಸ್ ವಿಭಾಗದಲ್ಲಿ ಸತೀಶ್ ಬೊಮ್ಮಟ್ಟಿ ಮತ್ತು ಈಕ್ಷಿತ್ ಕಂಚಿಲ್ ಪಾಡಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಜಲಜೀವನ್ ಮಿಷನ್ ಕಾರ್ಯಾಗಾರ ; ನೀರಿನ ಮಿತ ಬಳಕೆ ಹಾಗೂ ಇಂಗಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ – ಶ್ರೀಪಡ್ರೆ

ಕೇವಲ ಸಂಪನ್ಮೂಲಗಳ ಬಳಕೆ ಮಾತ್ರವಲ್ಲ ಅದರ ಮಿತಬಳಕೆ ಮತ್ತು ಸದುಪಯೋಗವು ಮುಖ್ಯ, ನೀರನ್ನು ಬಳಸುವುವದರೊಂದಿಗೆ ಇಂಗಿಸುವ ಮತ್ತು ಸಂಗ್ರಹಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಜಲತಜ್ಞ , ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹೇಳಿದರು . ಅವರು ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಜಲಜೀವನ್‌ ಮಿಷನ್ ಮತ್ತು...

ಶಾಸಕಿ ಭಾಗೀರಥಿ ಮುರುಳ್ಯರ ಮನೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಚಿಕ್ಕಮೇಳ ತಂಡ

ಶ್ರೀ ದುರ್ಗಾಪರಮೇಶ್ವರಿ ( ಶ್ರೀ ಉಳ್ಳಾಲ್ತಿ) ಸಂಚಾರಿ ತಿರುಗಾಟದ ಯಕ್ಷಗಾನ ಮೇಳ ಅಂಗ್ರಿ, ಕನ್ಯಾನ ಇಲ್ಲಿನ ಚಿಕ್ಕ ಮೇಳ ತಂಡ ಆ.1 ರಂದು ಗುತ್ತಿಗಾರಿನಿಂದ ಹೊರಟು ಸುಳ್ಯದ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯರವರ ಮನೆಯಲ್ಲಿ ಪ್ರದರ್ಶನ ನೀಡಿತು. ಇದರಲ್ಲಿ ಹಿಮ್ಮೇಳ ಕಲಾವಿದರಾಗಿ ಗೋಪಾಲಕೃಷ್ಣ ಭಟ್ ದೇವಸ್ಯ, ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ, ವೆಂಕಟೇಶ್...

ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಉಡುಪಿಗೆ ವರ್ಗಾವಣೆ

ಸುಳ್ಯ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್ ಚಂದ್ರ ಜೋಗಿ ಅವರಿಗೆ ಉಡುಪಿ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ಕಳೆದ ಮೂರೂವರೆ ವರ್ಷಗಳಿಂದ‌ ನವೀನ್ ಚಂದ್ರ ಅವರು ಸುಳ್ಯ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದ ಅವರು ಚುನಾವಣೆ ಬಳಿಕ ಸುಳ್ಯಕ್ಕೆ ಬಂದಿದ್ದರು. ಸರಕಾರ ರಾಜ್ಯದಲ್ಲಿ 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ...

ಬಿಳಿಯಾರಿನ ಯುವಕ ಅಂಶೀದ್ ಆತ್ಮಹತ್ಯೆ

ಅರಂತೋಡು ಗ್ರಾಮದ ಬಿಳಿಯಾರು ದಿ.ಮೂಸಾ – ಸೆಮೀರಾ ದಂಪತಿಗಳ ಪುತ್ರ ಅಂಶೀದ್ (17) ಎಂಬ ಯುವಕ ಮನೆಯೊಳಗೆ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.1ರಂದು ವರದಿಯಾಗಿದೆ. ಅಂಶೀದ್ ನ ತಾಯಿ ಮತ್ತು ಮನೆಯವರು ಎರ್ನಾಕುಲಂ ಗೆ ಹೋಗಿದ್ದರು. ಮನೆಯಲ್ಲಿ ಈತ ಒಬ್ಬನೆ ಇದ್ದನು. ಸಂಜೆ ಅರಂತೋಡಿನ ತನ್ನ ಅಜ್ಜಿಗೆ ಹೋಗಿ ಮಾತನಾಡಿ ಮನೆಗೆ ಬಂದಿದ್ದ.‌...
Loading posts...

All posts loaded

No more posts

error: Content is protected !!