Ad Widget

ವಿದ್ಯಾಬೋಧಿನೀ ಪ್ರೌಢಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಅಡುಗೆ ತಯಾರಿ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಫೆ.28ರಂದು ಅಡುಗೆ ತಯಾರಿ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 60 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

. . . . . . .

ಸ್ಪರ್ಧಾಳುಗಳಿಗೆ ಬೆಂಕಿ ಬಳಸದೆ ಒಂದು ತಿಂಡಿ ಹಾಗೂ ಪಾನೀಯ ಮತ್ತು ಬೆಂಕಿ ಬಳಸಿ ಒಂದು ತಿಂಡಿ ಹಾಗೂ ಪಾನೀಯ ತಯಾರಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ವಿದ್ಯಾರ್ಥಿಗಳು ನೀರುಳ್ಳಿ ಬಜೆ, ಪೋಡಿ, ಕ್ಷೀರಾ, ಫ್ರಟ್ ಸಲಾಡ್, ಕೇಕ್, ಕಲ್ಲಂಗಡಿ ಜ್ಯೂಸ್, ಎಳ್ಳು ಜ್ಯೂಸ್, ಲಿಂಬೆ ಜ್ಯೂಸ್, ಸ್ಟ್ರಾಬೆರಿ ಜ್ಯೂಸ್, ಕಾಫಿ, ಪಾನಕ, ಸಂಜೀರ, ವಡೆ, ತಂಬಿಟ್ಟು, ಚುರುಮುರಿ, ಕೋಸಂಬ್ರಿ ಮುಂತಾದ ಖಾದ್ಯಗಳನ್ನು ತಯಾರಿ ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!