ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಯಲ್ಲಿ ಉಪನ್ಯಾಸಕನಾಗಿರುವ ಸವಿನ್ ಸಿ. ಜಿ. ಯವರು ಮಂಡಿಸಿದ ಸಂಶೋಧನಾ ಪ್ರಬಂಧ ‘ Evaluation of hepatoprotecive activity of tuber extract of plant Actinoscitpus grossus (L. F.) Goetgh & D. A Simpson in wistar albino rats’ ಎಂಬ ವಿಷಯಕ್ಕೆ ಪ್ರತಿಷ್ಠಿತ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ನಿಟ್ಟೆ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಹೊಳ್ಳ ಮತ್ತು ಕೆವಿಜಿ ಮೆಡಿಕಲ್ ಕಾಲೇಜಿನ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಶಂಕರ ವೈ. ಎಂ.ರವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಂಡಿಸಿದರು.
ಇವರು ಕೊಲ್ಲಮೊಗ್ರು ಗ್ರಾಮದ ನಿವೃತ್ತ ಶಿಕ್ಷಕ ಗಣಪತಿ ಗೌಡ ಚಾಂತಾಳ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬೊಳಿಯಮ್ಮ ಡಿ. ಯವರ ಪುತ್ರ. ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ 7 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಪತ್ನಿ ಡಾ. ಅನನ್ಯ ರವರು ಕಡಬ ಪ್ರಾ.ಆರೋಗ್ಯ ಕೇಂದ್ರ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರ ಸಚಿನ್ ಚಾಂತಾಳ ನೇಸರ ಮಿನರಲ್ ವಾಟರ್ ಉದ್ಯಮ ನಡೆಸುತ್ತಿದ್ದಾರೆ.
- Thursday
- November 21st, 2024