ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನಲ್ಲಿ ಮಾ.05 ಮತ್ತು 06 ರಂದು ಭಾರತೀಯ ಸಂಸ್ಕಾರ ಸಿಂಧು ಕಾರ್ಯಕ್ರಮ ನಡೆಯಲಿದ್ದು, ಪೂರ್ವಭಾವಿ ಸಭೆ ಫೆ.27 ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ ಸಿಂಧು ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಭಾರತೀಯ ಸಂಸ್ಕಾರ ಸಿಂಧು ಸಂಯೋಜಕಿ ಹರಿಣಿ ಪುತ್ತೂರಾಯ, ಭಾರತೀಯ ಸಂಸ್ಕಾರ ಸಿಂಧು ಶಿಬಿರದ ಸಂಪರ್ಕ ಪ್ರಮುಖ್ ಶ್ರೀಮತಿ ಸುಭಾಷಿಣಿ ಶಿವರಾಮ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತಾ ಗುಂಡಡ್ಕ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ವನಜಾ.ವಿ.ಭಟ್, ಶೋಭಾ ಗಿರಿಧರ್, ಭಾರತಿ ದಿನೇಶ್, ಲತಾ ಸರ್ವೇಶ್, ದಿನೇಶ್ ಸಂಪ್ಯಾಡಿ, ದಿಲೀಪ್ ಉಪ್ಪಳಿಕೆ, ಸುಜಾತ ಕಲ್ಲಾಜೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಭಾರತೀಯ ಸಂಸ್ಕಾರ ಸಿಂಧು ಕಾರ್ಯಕ್ರಮವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಅವರ ಅಧ್ಯಕ್ಷತೆಯಲ್ಲಿ ಮಾ.05 ರಂದು ಸಂಜೆ ಉದ್ಘಾಟನೆಗೊಳ್ಳಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ ಸಂಚಾಲಕರಾದ ಗಣೇಶ್ ಪ್ರಸಾದ್, ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಇದರ ಪ್ರಾಂಶುಪಾಲರಾದ ಡಾ| ಗೋವಿಂದ.ಎನ್.ಎಸ್ ಇವರುಗಳು ಆಗಮಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಡಾ| ತೇಜಸ್ವಿನಿ ಗೌಡ, ತಾಲೂಕು ಆಸ್ಪತ್ರೆ ಸುಳ್ಯ ಮಕ್ಕಳ ತಜ್ಞರಾದ ಡಾ| ರಜನಿ ಮನೋಜ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿಗಳಾದ ಪ್ರಸನ್ನ ದರ್ಬೆ, ಸಾಮಾಜಿಕ ಕಾರ್ಯಕರ್ತರುಗಳಾದ ರಾಧಾಕೃಷ್ಣ ಅಡ್ಯಂತಾಯ, ಸುರೇಶ್ ಪರ್ಕಳ ಕಲ್ಲಡ್ಕ, ಯತೀಶ್ ಆರ್ವರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್, ಕೆ.ವಿ.ಎಸ್.ಎಂ ಪ್ರೌಢಶಾಲೆ ಕಾಂಚನದ ಮುಖ್ಯೋಪಾಧ್ಯಾಯರಾದ ಸೂರ್ಯಪ್ರಕಾಶ್ ಉಡುಪ ಇವರುಗಳು ಈ ಶಿಬಿರದಲ್ಲಿ ಮಾಹಿತಿ ನೀಡಲಿದ್ದಾರೆ.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾ.06 ರಂದು ಸಂಜೆ ಭಾರತೀಯ ಸಂಸ್ಕಾರ ಸಿಂಧು ಶಿಬಿರದ ಸಂಪರ್ಕ ಪ್ರಮುಖ್ ಶ್ರೀಮತಿ ಸುಭಾಷಿಣಿ ಶಿವರಾಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಧರ್ಮದರ್ಶಿಗಳಾದ ನಾ.ಸೀತರಾಮ್ ಅವರು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ವರದಿ :- ಉಲ್ಲಾಸ್ ಕಜ್ಜೋಡಿ