Ad Widget

ಬಂದಡ್ಕ : ಪಾಲಾರ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಶುಭಾರಂಭ

ಡಾ| ಶರಣ್ಯ ಅಖಿಲೇಶ್ ಭಟ್ ಪಾಲಾರ್ ಮಾಲಕತ್ವದ ನೂತನ ಡೆಂಟಲ್ ಕ್ಲಿನಿಕ್ ಬಂದಡ್ಕದ ಜಬಲ್ ನೂರ್ ಕಾಂಪ್ಲೆಕ್ಸ್ ನಲ್ಲಿ ಫೆ.14 ರಂದು ಶ್ರೀ ಗಣಪತಿ ಹವನ ಹಾಗೂ ಶ್ರೀ ಧನಲಕ್ಷ್ಮಿ ಪೂಜಾ ವಿಧಿಯೊಂದಿಗೆ ಶುಭಾರಂಭಗೊಂಡಿತು.

. . . . .


ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಡಾ| ಮುರಳಿ ಮೋಹನ್ ಚೂಂತಾರು ಮಾತನಾಡಿ ವೈದ್ಯರುಗಳಿಗೆ ಕೇವಲ ನೋವನ್ನು ಶಮನ ಮಾಡುವುದು ಮಾತ್ರವಲ್ಲದೆ ಸಾಮಾಜಿಕ ಹೊಣೆಗಾರಿಕೆಯೂ ಇರುತ್ತದೆ. ರೋಗಗಳನ್ನು ಗುರುತಿಸಿ ರೋಗಿಯನ್ನು ಸಂಕಷ್ಟದಿಂದ ಪಾರು ಮಾಡುವಂತಹ ವೃತ್ತಿ ಧರ್ಮವನ್ನು ಎತ್ತಿ ಹಿಡಿಯಬೇಕಾದುದು ವೈದ್ಯರ ಕರ್ತವ್ಯವಾಗಿದೆ ಎಂದರು. ಹಾಗೂ ನೂತನ ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬಂದಡ್ಕ ದೀಪಾ ಹಾಸ್ಪಿಟಲ್ ನ ಡಾ| ಉದಯಶಂಕರ್.ಟಿ, 10ನೇ ವಾರ್ಡ್ ಪಂಚಾಯತ್ ಸದಸ್ಯ ಕುಂಞಿರಾಮನ್ ತವನಮ್, 6ನೇ ವಾರ್ಡ್ ಸದಸ್ಯ ಅರವಿಂದನ್ ಸಂಸ್ಥೆಗೆ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಕುತ್ತಿಕೋಲು ಗ್ರಾ.ಪಂ. ಅಧ್ಯಕ್ಷ ಮುರಳಿ ಪಯ್ಯಂಗಾನಮ್ ನೂತನ ಕ್ಲಿನಿಕ್ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.


ಬೆಳ್ಳಾರೆಯ ಉದ್ಯಮಿ ಬಿ.ಸುಬ್ರಹ್ಮಣ್ಯ ಜೋಶಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಡಾ| ಶರಣ್ಯ ಅಖಿಲೇಶ್ ಪಾಲಾರ್ ಕ್ಲಿನಿಕ್ ನ ಎಕ್ಸ್ ರೇ ಯೂನಿಟ್ ಸೌಲಭ್ಯ, ತಜ್ಞ ವೈದ್ಯರುಗಳ ಲಭ್ಯತೆ ಬಗ್ಗೆ, ಮಾಹಿತಿ ನೀಡಿದರು.
ಕು.ಪ್ರಿಯಾಂಕಾ ನೆಲ್ಲಿತ್ತಾಯ ಪ್ರಾರ್ಥನೆಗೈದರು. ಪ್ರೀತಿ ಕೃಷ್ಣ ಕುಮಾರ್ ವಂದನಾರ್ಪಣೆಗೈದರು. ಪಾಲಾರ್ ಕುಟುಂಬದ ಹಿರಿಯರಾದ ಕೃಷ್ಣ ಭಟ್ ದಂಪತಿಗಳು, ಮಕ್ಕಳಾದ ಕೃಷ್ಣ ಕುಮಾರ್, ವಿಜಯ ಸುಬ್ರಹ್ಮಣ್ಯ ದಂಪತಿಗಳು, ಅಖಿಲೇಶ್ ಪಾಲಾರ್ ಹಾಗೂ ಅವರ ಬಂಧುಗಳು, ಊರಿನ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!