ಹಲವು ವರ್ಷಗಳ ಬೇಡಿಕೆ ಯಾಗಿರುವ ಜಟ್ಟಿಪಳ್ಳ ನೀರಬಿದಿರೆ ದುಗ್ಗಲಡ್ಕ ರಸ್ತೆಯು ಹಂತ ಹಂತದಲ್ಲಿ ಅಭಿವೃದ್ಧಿ ಗೊಳ್ಳುತ್ತಿದ್ದು ಕೆಲಸ ಮಾಡಲು ತಿಳಿಯದ ಕಾಂಗ್ರೆಸ್ಸಿಗರು ಪ್ರತಿಭಟನೆ -ಪಾದಯಾತ್ರೆ ಯ ದೊಂಬರಾಟ ಮಾಡುತ್ತಿದ್ದಾರೆ
ಈ ರಸ್ತೆಯ ಆಯ್ದ ಭಾಗದಲ್ಲಿ ಕಾಂಕ್ರಿಟಿಕರಣ ನಡೆದಿದ್ದು ಈ ರಸ್ತೆಯು ಸುಳ್ಯ ನಗರದಿಂದ ಸುಬ್ರಹ್ಮಣ್ಯ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಸದ್ರಿ ರಸ್ತೆಯನ್ನು ಆಗಲ ಗೊಳಿಸಿ ಸರ್ವರುತು ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಮಾನ್ಯ ಸಚಿವರು ಈಗಾಗಲೇ ಪ್ರಸ್ತಾವನೆ ನೀಡಿದ್ದು ಅನುದಾನದ ಕೊರತೆಯಿಂದ ಈ ಕಾಮಗಾರಿಯ ಮಂಜೂರಾತಿ ತಡವಾಗುವ ಹಿನ್ನೆಲೆಯಲ್ಲಿ 50ಲಕ್ಷ ರೂ ಗಳ ಅನುದಾನವನ್ನು ಈ ರಸ್ತೆಗೆ ನೀಡಿದ್ದು ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆದು ಆಯ್ದ ಸ್ಥಳಗಳ ಡಾಮರಿಕರಣ ನಡೆಯಲಿದೆ. ಈ ಅನುದಾನದ ಸುಳಿವು ತಿಳಿದ ಕಾಂಗ್ರೆಸ್ಸಿಗರು ಅಭಿವೃದ್ಧಿಯ ಶ್ರೇಯಸ್ಸನ್ನು ತಮ್ಮ ತಲೆಗೇರಿಸಿಕೊಳ್ಳಲು ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ.
ಕಾಂಗ್ರೆಸ್ಸಿಗರು ನಗರದ ಹಲವು ಅಭಿವೃದ್ಧಿ ಗಳ ವಿವರವನ್ನು ಮಾಹಿತಿ ಹಕ್ಕಿನಲ್ಲಿ ಕೇಳುತ್ತಿದ್ದು ಬದಲಾಗಿ 25ವರ್ಷಗಳ ಹಿಂದೆ ಸುಸ್ಥಿತಿ ಯಲ್ಲಿದ್ದ ಈ ರಸ್ತೆಯನ್ನು ಅಭಿವೃದ್ಧಿ ಹೆಸರಲ್ಲಿ ಹಾಳುಗೆಡಹಿದ ಹುಡ್ಕೋ ಹಗರಣದಲ್ಲಿ ರಾಜ್ಯದಲ್ಲಿ ದುರ್ಬಳಕೆಯಾದ ಹಣದ ಕುರಿತು ಮಾಹಿತಿ ಪಡೆಯಲಿ. ಆ ಸಂದರ್ಭದಲ್ಲಿ ಈ ಹಗರಣ ದಲ್ಲಿ ಭಾಗಿಯಾದವರೇ ಈಗ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಾಗಿದ್ದು ಅವರದೇ ಪಕ್ಷದವರು ಪಾದಯಾತ್ರೆ ನಾಟಕವಾಡುತ್ತಿರುವುದು ಹಾಸ್ಯಾಸ್ಪದ ವಾಗಿದೆ
ಜಟ್ಟಿಪಳ್ಳ ನೀರಬಿದಿರೆ ದುಗ್ಗಲಡ್ಕ ರಸ್ತೆಯು ಸುಮಾರು 7 ಕಿ ಮೀ ಉದ್ದವಿದ್ದು ಇದರ ಅಭಿವೃದ್ಧಿಯನ್ನು ನ ಪಂ ಅನುದಾನದಲ್ಲಿ ಅಭಿವೃದ್ಧಿ ಪಡಿಸುವುದು ಕಷ್ಟ ಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಅನುದಾನದ ಮೂಲಕವೇ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಾಸ್ತವವನ್ನು ಅರಿತುಕೊಂಡು ಸ್ಥಳೀಯರು ಸಹಕಾರ ನೀಡಿದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲು ಬಿಜೆಪಿ ಯು ಬದ್ದವಾಗಿದೆ ಎಂದು ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಜಂಟಿ ಪತ್ರಿಕಾ ಹೇಳಿಯಲ್ಲಿ ತಿಳಿಸಿದ್ದಾರೆ.
- Sunday
- November 24th, 2024