
ಅಮರ ಸುಳ್ಯ ವಾಹನ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಪಾರ್ಕಿಂಗ್ ಸ್ಥಳದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಜಿ.ಜಯರಾಮ ರವರು ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪಿ.ಜಿ.ಜಯರಾಮ, ಕಾರ್ಯದರ್ಶಿ ಯಾಗಿ ನಝೀರ್ ಶಾಂತಿನಗರ ಪುನರಾಯ್ಕೆಯಾದರು. 13 ಜನ ನಿರ್ದೇಶಕ ರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ನಝೀರ್ ಶಾಂತಿನಗರ ವರದಿ ವಾಚಿಸಿ, ಸ್ವಾಗತಿಸಿ, ವಂದಿಸಿದರು.