Ad Widget

ಬೆಳ್ಳಾರೆ : ಹಿರಿಯ ಗೃಹರಕ್ಷಕರಿಗೆ ಸನ್ಮಾನ : ಪ್ರಭಾಕರ, ರಾಮಚಂದ್ರ,ನಾರಾಯಣ ಮಣಿಯಾಣಿ ಯವರನ್ನು ಸನ್ಮಾನಿಸಿದ ಡಾ| ಮುರಲೀ ಮೋಹನ್ ಚೂಂತಾರು

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕರಿಗೆ ಫೆ.20 ರಂದು ಸನ್ಮಾನ ಕಾರ್ಯಕ್ರಮವು ಬೆಳ್ಳಾರೆ ಗೃಹರಕ್ಷಕದಳ ಘಟಕ ಕಛೇರಿಯಲ್ಲಿ ನಡೆಯಿತು. ಪ್ರಭಾಕರ್ ರವರು 1993ರಲ್ಲಿ ಗೃಹರಕ್ಷಕದಳ ಸದಸ್ಯರಾಗಿ ಸೇರ್ಪಡೆಯಾಗಿ, 29 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತ ಬಂದಿರುತ್ತಾರೆ.  ರಾಮಚಂದ್ರ ರವರು 2000 ರಲ್ಲಿ ಗೃಹರಕ್ಷಕದಳ ಸದಸ್ಯನಾಗಿ ಸೇರ್ಪಡೆಯಾಗಿ 22 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ನಾರಾಯಣ  ಮನಿಯಾಣಿ 2008 ರಲ್ಲಿ ಗೃಹರಕ್ಷಕದಳ ಸದಸ್ಯನಾಗಿ ಸೇರ್ಪಡೆಯಾಗಿ, 14 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿರುವ ಇವರ ಸೇವೆಯನ್ನು ಗುರುತಿಸಿ, ಗೌರವಿಸಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಘಟಕದ ಪ್ರಭಾರ ಘಟಕಧಿಕಾರಿ ವಸಂತ ಕುಮಾರ್, ಹಿರಿಯ ಗೃಹರಕ್ಷಕರಾದ ಸೀತಾರಾಮ್, ಅಣ್ಣು, ವೀರನಾಥ, ಪದ್ಮನಾಭ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

Discover more from ಅಮರ ಸುದ್ದಿ

Subscribe to get the latest posts sent to your email.

. . . . . . . . .

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading