ಮಳೆಗಾಲದಲ್ಲಿ ದ್ವೀಪದಂತಾಗುತ್ತಿದ್ದ ಮಡಪ್ಪಾಡಿ ಗ್ರಾಮದ ಎಳುವೆ ಭಾಗದ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಎಸ್ ಅಂಗಾರ ಫೆ.17 ರಂದು ಚಾಲನೆ ನೀಡಿದರು. ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಕಡ್ಯ ಹೊಳೆಗೆ ಎಳುವೆ ಬಳಿ ಸೇತುವೆ ನಿರ್ಮಾಣವಾಗಲಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎ.ಪಿ.ಎಂ.ಸಿ.ಅಧ್ಯಕ್ಷ ವಿಜಯಕುಮಾರ್ ಮುಳುಗಾಡು, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ,ಗ್ರಾ.ಪಂ.ಸದಸ್ಯ ಜಯರಾಮ ಹಾಡಿಕಲ್ಲು, ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ಟಿ.ಹೊನ್ನಪ್ಪ, ಕರುಣಾಕರ ಪಾರೆಪ್ಪಾಡಿ, ಚಂದ್ರಮತಿ ಪಿ.ಜಿ., ಚಂದ್ರಶೇಖರ ಗೋಳ್ಯಾಡಿ, ರಾಮಚಂದ್ರ ಬಳ್ಳಡ್ಕ, ಲೋಕಪ್ಪ ಶೀರಡ್ಕ, ಭವಾನಿಶಂಕರ ಬಾಳಿಕಳ, ನಿತ್ಯಾನಂದ ಬಳ್ಳಡ್ಕ, ವಿನೋದ್ ಪೂಂಬಾಡಿ, ಯತೀಶ್ ಕಡ್ಯ, ಹವಿನ್ ದೋಳ, ಮಂಜುನಾಥ ಭಟ್, ವಿಂದೇಶ್ ಜೀರ್ಮಕ್ಕಿ, ಇಂದಿರಾಮತಿ, ಜಯರಾಮ, ಪದ್ಮನಾಭ, ಕುಸುಮಾಧರ ಕಡ್ಯ, ಇಂಜಿನಿಯರ್ ಸಣ್ಣೇಗೌಡ, ಜೂನಿಯರ್ ಇಂಜಿನಿಯರ್ ಪರಮೇಶ್ವರ,ಗುತ್ತಿಗೆದಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.