ಬದುಕು ಒಂದು ಜಂಜಾಟ, ವಿಧಿಯ ಜೊತೆಗೆ ಕಾದಾಟ,
ಸೋಲು-ಗೆಲುವಿನ ಮಧ್ಯೆ ನಮ್ಮ ಪರದಾಟ…
ಬದುಕೇ ಸೆಣಸಾಟ, ಯಾತಕೆ ಕಾದಾಟ…
ಮುಗಿಯದ ಈ ಆಟ, ಬದುಕಿನ ಸೆಣಸಾಟ…
ಈ ಬದುಕಿನ ಹಾದಿಲಿ ನೋವು-ನಲಿವು ಸಾಮಾನ್ಯ, ಸರಿದೂಗಿಸಿ ಸಾಗುವವನೇ ಅಸಾಮಾನ್ಯ, ಇಲ್ಲಿ ಅಸಾಮಾನ್ಯ…
ಬದುಕಿನ ಪ್ರತಿ ಹೆಜ್ಜೆಲೂ ಸೋಲು ಕಲಿಸುವುದು ಪಾಠ, ಸೋತು ಗೆದ್ದವರು ಸೃಷ್ಟಿಸುವರು ಇತಿಹಾಸ…
ಈ ನೋವಿನ ಬದುಕಿನಲಿ ಯಾರು ಯಾರಿಗೂ ಅಲ್ಲ, ನಮ್ಮವರೇ ನಮಗಿಲ್ಲಿ ಎಂದಿಗೂ ಆಗಲ್ಲ…
ಬಿಟ್ಟು ಹೋದವರು ಎಂದೂ ತಿರುಗಿ ಬಾರರು ಮತ್ತೆ, ಅವರ ನೆನೆದು ಯಾಕೆ ನಾವು ಅಳಬೇಕು, ಮರೆತು ಬಾಳಬೇಕು, ಮುಂದೆ ಸಾಗಬೇಕು…
✍ಉಲ್ಲಾಸ್ ಕಜ್ಜೋಡಿ