

ಯುವ ಸ್ಪೂರ್ತಿ ಸೇವಾ ಸಂಘ ಕಲ್ಮಡ್ಕ ಇದರ ವತಿಯಿಂದ ಎರಡನೇ ತರಗತಿಯಿಂದ ಹತ್ತನೇ ತರಗತಿವರೆಗೆ ಬಣ್ಣದ ಹೆಜ್ಜೆ ಮೌಲ್ಯಧಾರಿತ ಕರಕುಶಲ ತಯಾರಿ ತರಬೇತಿ ಶಿಬಿರವು ಫೆಬ್ರವರಿ 13ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕದಲ್ಲಿ ನಡೆಯಿತು . ಮಹಾಬಲ ಕೆರೆಕೋಡಿ ರಂಗಕರ್ಮಿ ರಂಗ ಸುರಭಿ ಕಲ್ಮಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಯುವ ಸ್ಪೂರ್ತಿ ಸೇವಾ ಸಂಘ ರಿ. ಕಲ್ಮಡ್ಕ ಇದರ ಅಧ್ಯಕ್ಷರಾದ ಶಿವರಾಮ ಕೊಳೆಂಜಿಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹಳೆ ವಿದ್ಯಾರ್ಥಿ ಸಂಘ ಕಲ್ಮಡ್ಕ ಇದರ ಅಧ್ಯಕ್ಷರಾದ ವಿ ಸುಬ್ರಾಯ ಓಣಿಯಡ್ಕ,
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಬೊಮ್ಮೆಟ್ಟಿ, ಸ.ಹಿ.ಪ್ರಾ. ಶಾಲೆ ಕಲ್ಮಡ್ಕ ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಜ್ರಾಕ್ಷಿ , ತರಬೇತುದಾರರಾದ ಶಿವರಾಮ ಜೋಗಿಬೆಟ್ಟು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಚಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.