Ad Widget

ಐವರ್ನಾಡು: ಕ್ರಿಕೆಟ್ ಪಂದ್ಯಾಟ

ಐವರ್ನಾಡಿನ ಮಾಡತ್ತಕಾನ ಸ್ಪೋಟ್ಸ್ ಕ್ಲಬ್ ಇದರ ಸಹಕಾರದೊಂದಿಗೆ, ಐಪಿಎಲ್ ಸಮಿತಿ ಇದರ ಆಶ್ರಯದಲ್ಲಿ ಆರನೇ ವರ್ಷದ ಆರು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವು ಫೆ.13 ರಂದು ಐವರ್ನಾಡು ‌ಫ್ರೌಡಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಐವರ್ನಾಡು ಪ್ರಾ.ಕೃ.ಪ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥ ನೆರವೇರಿಸಿದರು. ಪಂದ್ಯಾಟದಲ್ಲಿ ಕರುಣಾಕರ ಮಡ್ತಿಲ ಮಾಲಕತ್ವದ ಮಡ್ತಿಲ ಬ್ಲಾಸ್ಟಸ್೯, ವಾಸುದೇವ ಬೊಳುಬೈಲು ಮಾಲಕತ್ವದ ಬೊಳುಬೈಲು ವಾರಿಯಸ್೯, ರವಿಪ್ರಸಾದ್ ಚೆಮ್ನೂರು ಮಾಲಕತ್ವದ ಸಿಟಿ ಬಾಯ್ಸ್ ಐವರ್ನಾಡು, ನಟರಾಜ್ ಜಬಳೆ ಮಾಲಕತ್ವದ ಗೋಲ್ಡನ್ ಬಾಯ್ಸ್ ಐವರ್ನಾಡು, ಜಯಪ್ರಕಾಶ್ ‌ನೆಕ್ರಪ್ಪಾಡಿ ಮಾಲಕತ್ವದ ವೈಟ್ ಈಗಲ್ಸ್ ಪಾಲೆಪ್ಪಾಡಿ, ದೇವಿಪ್ರಸಾದ್ ಕೊಪ್ಪತ್ತಡ್ಕ ಮಾಲಕತ್ವದ ಸ್ವಸ್ತಿಕ್ ಲಯನ್ಸ್ ದೇರಾಜೆ ಪಾಲ್ಗೊಂಡಿದ್ದವು. ಫೈನಲ್ ಪಂದ್ಯಾಟದಲ್ಲಿ ಮಡ್ತಿಲ ‌ಬ್ಲಾಸ್ಟಸ್೯ ತಂಡವು ಜಯ ಗಳಿಸಿತು. ಸಿಟಿ ಬಾಯ್ಸ್ ಐವರ್ನಾಡು ದ್ವಿತೀಯ ಸ್ಥಾನ ಪಡೆದುಕೊಂಡಿತು. ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೈಯಕ್ತಿಕ ಪದರ್ಶನ ನೀಡಿ ಗೌರವಿಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪವಿತ್ರಮಜಲು, ಮಾಜಿ ಗ್ರಾ.ಪಂ ಸದಸ್ಯ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading