Ad Widget

ಬೆಳ್ಳಾರೆ: ಅಜಪಿಲ ಜಾತ್ರಾ ಸಂಭ್ರಮ- ಜಾತ್ರೋತ್ಸವದ ಅಂಗವಾಗಿ ಶ್ರೀ ದೇವರ ನೃತ್ಯ ಬಲಿ

ಫೆ.16ರಂದು ಹಗಲು ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಅಗ್ನಿಗುಳಿಗ ದೈವದ ನೇಮೋತ್ಸವ

. . . . .

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.12ರಿಂದ ಫೆ.16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು, ಫೆ.14 ಸೋಮವಾರದಂದು ಬೆಳಗ್ಗೆ ಗಣಪತಿ ಹವನ, ಉಷಾಃಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪೂಜೆಯ ಬಳಿಕ ಶ್ರೀ ದೇವರ ನೃತ್ಯ ಬಲಿ ಕಾರ್ಯಕ್ರಮ ನಡೆಯಿತು. ನಂತರ ಅನ್ನಪ್ರಸಾದ ವಿತರಣೆ ನಡೆಯಿತು.

ಫೆ.15 ಮಂಗಳವಾರದಂದು ಬೆಳಗ್ಗೆ 7.00ಕ್ಕೆ ಗಣಪತಿ ಹವನ, ಉಷಾಃಪೂಜೆ, ಬೆಳಗ್ಗೆ 8.00ಕ್ಕೆ ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಶಿವೇಲಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.00ಕ್ಕೆ ಶ್ರೀ ಭೂತಬಲಿ, ಸೇವೆ ಸುತ್ತು, ಪೇಟೆ ಸವಾರಿ, ಸಿಡಿಮದ್ದು ಪ್ರದರ್ಶನ, ರಾತ್ರಿ 9.00ಕ್ಕೆ ರಾತ್ರಿ ಪೂಜೆ, ರಾತ್ರಿ 10.00ಕ್ಕೆ ಶಯನ, ಕವಾಟಬಂಧನ ನೆರವೇರಲಿದೆ. ಫೆ.16 ಬುಧವಾರದಂದು ಬೆಳಗ್ಗೆ 7.00ಕ್ಕೆ ಕವಾಟೋದ್ಘಾಟನೆ, ತೈಲಾಭ್ಯಂಜನ, ಬೆಳಗ್ಗೆ 8.00ಕ್ಕೆ ಉಷಾಃಪೂಜೆ, ಬೆಳಗ್ಗೆ 8.30ಕ್ಕೆ ಆರಾಟು ಬಲಿ, ಬೆಳಗ್ಗೆ 9.30ಕ್ಕೆ ಅವಭೃಥ ಸ್ನಾನ, ದರ್ಶನ ಬಲಿ ನಡೆದು ಮಧ್ಯಾಹ್ನ 11.30ಕ್ಕೆ ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ ನಡೆಯಲಿದೆ. ಬಳಿಕ ಧ್ವಜ ಅವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7.30ರಿಂದ ಅಗ್ನಿಗುಳಿಗ ದೈವದ ಭಂಡಾರ ತೆಗೆದು, ಭೂತಕೋಲ, ಬಟ್ಟಲು ಕಾಣಿಕೆ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!