
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ.ಸಿ. ಟ್ರಸ್ಟ್.(ರಿ) ಗುತ್ತಿಗಾರು ವಲಯದ ನಾಲ್ಕೂರು ಗ್ರಾಮದ ನಡುಗಲ್ಲು ಸೇವಾ ಕೇಂದ್ರದಲ್ಲಿ ಗ್ರಾಹಕ ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ತಾಲೂಕು ಜನಜಾಗೃತಿ ಸದಸ್ಯ, ಹಾಗೂ ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ಚಾರ್ಮಾತ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕ ವಸಂತ್ ಉತ್ರಂಬೆ ಯವರು ಲ್ಯಾಪ್ ಟಾಪ್ ಹಸ್ತಾಂತರಿಸಿದರು. ವಲಯ ಮೇಲ್ವಿಚಾರಕ ಮುರಳೀಧರ ರವರು ಸರಕಾರದ ಹಾಗೂ ಯೋಜನೆ ಕಾರ್ಯಕ್ರಮ ಕ್ರಮಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲೀಲಾವತಿ ಅಂಜೇರಿ, ಹರೀಶ್ ಕೊಯಿಲ, ಒಕ್ಕೂಟದ ಅಧ್ಯಕ್ಷ ರಾದ ಶಾಂತಪ್ಪ ಉತ್ರಂಬೆ. ಸತೀಶ್ ಬೊಂಬುಳಿ. ಉಪಾಧ್ಯಕ್ಷ ಆನಂದ ಅಂಜೇರಿ. ಕಾರ್ಯದರ್ಶಿ ಉಮೇಶ್ವರಿ ನೆಲ್ಲಿಪುಣಿ. ಕರುಣಾಕರ ಸಂಪ್ಯಾಡಿ. ಒಕ್ಕೂಟದ ಪದಾಧಿಕಾರಿಗಳಾದ ಭಾರತಿ ಮರಕತ. ಪುರುಷೋತ್ತಮ ಕಲ್ಲಾಜೆ. ಲೋಹಿತ್ ಚೆಮನೂರು. ವಿಪತ್ತು ನಿರ್ವಹಣಾ ಘಟಕದ ಸದಸ್ಯರು. ಉಪಸ್ಥಿತರಿದ್ದರು. ನಾಲ್ಕೂರೂ ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.