ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಸುಳ್ಯದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ನಿತಿನ್ ಪ್ರಭು ಅವರು ಗೆಲುವು ಸಾಧಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 4590 ಮಂದಿ ಪಶುವೈದ್ಯಕೀಯ ಸೇವಾ ಇಲಾಖೆಯ ಪಶುವೈದ್ಯರು ಮತದಾರರಾಗಿದ್ದರು.
ಪರಿಷತ್ತಿಗೆ ಒಟ್ಟು 4 ಮಂದಿ ಸದಸ್ಯರು ಆಯ್ಕೆ ಆಗಬೇಕಾಗಿತ್ತು. ಒಟ್ಟು 18 ಮಂದಿ ಸ್ಪರ್ಧಾಕಣದಲ್ಲಿದ್ದರು. ಆನ್ಲೈನ್ ಮೂಲಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಉಳಿದವರಿಗಿಂತ ಹೆಚ್ಚು (1571) ಮತ ಪಡೆದ ಡಾ.ನಿತಿನ್ ಪ್ರಭು ಪಶುವೈದ್ಯ ಪರಿಷತ್ ಸದಸ್ಯರಾಗಿ ಚುನಾಯಿತರಾದರು.
- Thursday
- November 21st, 2024