ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಆರಂಭವಾಗಿದ್ದು ಇಂದು
ಬೆಳಿಗ್ಗೆ ವಿವಿಧ ವೈದಿಕ ಕಾರ್ಯಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ಬಲಿ ಉತ್ಸವ ನಡೆಯಿತು. ಫೆ.14 ರವರೆಗೆ ಕಾರ್ಯಕ್ರಮ ನಡೆಯಲಿದೆ.
ಫೆ. 13ರಂದು ಬೆಳಿಗ್ಗೆ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ದರ್ಶನ ಬಲಿ ಉತ್ಸವ, ಗಂಧ ಪ್ರಸಾದ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಸಂಜೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ, ದೈವಗಳ ಭಂಡಾರ ತೆಗೆಯುವುದು, ರಾತ್ರಿ ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ಬಳಿಕ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮೋತ್ಸವ, ಕಾಣಿಕೆ, ಪ್ರಸಾದ ವಿತರಣೆ ಜರಗಲಿದೆ. ಫೆ. 14ರಂದು ಬೆಳಿಗ್ಗೆ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಕಲ್ಲೇರಿತ್ತಾಯ ಭಂಡಾರ ತೆಗೆದು ಕಾಯಾರ ಮಾಡದಲ್ಲಿ ನೇಮೋತ್ಸವ, ಸಂಜೆ, ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8.30ರಿಂದ ರಂಗಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ 10.00ರಿಂದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ದೈವಗಳ ನೇಮ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ಬಲಿ ನಡೆಯಲಿದೆ.
ಫೆ. 11ರಿಂದ 14ರ ತನಕ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಫೆ. 13ರಂದು ಸಂಜೆ 5.00ರಿಂದ ಯಕ್ಷಗಾನ ಬಯಲಾಟ ದಕ್ಷಯಾಗ, ಷಣ್ಮುಖ ವಿಜಯ ನಡೆಯಲಿದೆ.