ಪೇರಡ್ಕ ದರ್ಗಾ ಶರೀಫ್ ವಠಾರದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಫೆ. 18 ರಿಂದ ಫೆ. 20 ವರೆಗೆ ಉರೂಸ್ ಸಮಾರಂಭ ಮತ್ತು ಮೂರು ದಿನಗಳ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಎಂ.ಜೆ.ಎಂ ಪೇರಡ್ಕದ ಗೌರವಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಫೆ.11 ರಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮೊದಲ ದಿನ ಜುಮಾ ನಮಾಜಿನ ಬಳಿಕ ಧ್ವಜಾರೋಹಣವನ್ನು ಎಂ. ಜೆ. ಎಂ ಪೇರಡ್ಕದ ಅಧ್ಯಕ್ಷ ಎಸ್. ಆಲಿ ಹಾಜಿ ನೆರವೇರಿಸಲಿದ್ದಾರೆ. ಪ್ರಾರ್ಥನೆಯನ್ನು ಎಂ.ಜೆ.ಎಂ ಪೇರಡ್ಕದ ಖತೀಬರು ಬಹು| ರಿಯಾಝ್ ಫೈಝಿ ಮಾಡಲಿದ್ದಾರೆ ಮಧ್ಯಾಹ್ನ ನಂತರ ಮುಖಾಂ ಅಲಂಕಾರ ಮತ್ತು ಕೂಟುಪಾರ್ಥನೆ ನಡೆಯಲಿದೆ . ರಾತ್ರಿ ಸ್ವಗಂ ಆಗ್ರಹಿಕ್ಕುನ್ನ ಯುವದಿ ಯವಾಕಳ್ ವಿಷಯದ ಕುರಿತು ಬಹು| ಉಮರ್ ಹುದವಿ ಪುಳಪಾಡಂ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಹಾಗೂ ಎರಡನೇ ದಿನದಂದು ಶಿಥಿಲಮಾಕುನ್ನ ಬಂಧಂಙಳ್ ವಿಷಯದ ಕುರಿತು ಬಹು| ಉಸ್ತಾದ್ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಪ್ರಭಾಷಣ ಮಾಡಲಿದ್ದಾರೆ. ಮೂರನೇ ದಿನ ರಾತ್ರಿ 7 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ಆ ಸಂದರ್ಭದಲ್ಲಿ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯದ ಅಧ್ಯಕ್ಷ ಬಹು | ಅನೀಸ್ ಕೌಸರಿ ಮುಖ್ಯ ಭಾಷಣ ಮಾಡಲಿದ್ದಾರೆ. 9 ಗಂಟೆಗೆ ಎಂ.ಜೆ.ಎಂ ಪೇರಡ್ಕದ ಬಹು| ರಿಯಾಝ್ ಫೈಝಿ ಎಮ್ಮೆಮಾಡು ಧಾರ್ಮಿಕ ಉಪನ್ಯಾಸ ಮಾಡಲಿದ್ದಾರೆ. ಅಲ್ಲದೇ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಪಾಜೆಯ ಗ್ರಾಮ ಪಂಚಾಯತ್ ಅಧ್ಯಕ್ಷ ಜ| ಜಿ. ಕೆ ಹಮೀದ್, ರಿಯಾಝ್ ಕಲ್ಲುಗುಂಡಿ, ಎಂ.ಜೆ.ಎಂ ಪೇರಡ್ಕ ಗೂನಡ್ಕದ ಪ್ರ.ಕಾರ್ಯದರ್ಶಿ ಟಿ. ಎಂ ಅಬ್ದುಲ್ ರಝಾಕ್ ಹಾಜಿ, ಎಸ್.ಕೆ.ಎಸ್.ಎಸ್ ಎಫ್ ಗೂನಡ್ಕ ಶಾಖೆಯ ಅಧ್ಯಕ್ಷ ಹಾಜಿ ಸಾಜಿದ್ ಅಝ್ಹರಿ ಉಪಸ್ಥಿತರಿದ್ದರು.
- Saturday
- November 23rd, 2024