ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅರಂತೋಡು ಹಿಂದೂ ರುದ್ರಭೂಮಿ ಅಭಿವೃದ್ಧಿಗೆ 2.5 ಲಕ್ಷ ಅನುದಾನ ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ಜಿಲ್ಲಾನಿರ್ದೇಶಕರಾದ ಪ್ರವೀಣ್ ಕುಮಾರ್ ಪಂಚಾಯತ್ ಅಧ್ಯಕ್ಷರಾದ ಹರಿಣಿ ದೇರಾಜೆಯವರಿಗೆ ಹಸ್ತಾಂತರಿಸಿ ಶೀಘ್ರವಾಗಿ ಕಾಮಗಾರಿ ಪೂರ್ತಿಗೊಳ್ಳಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ವೇತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಯೋಜನಾಧಿಕಾರಿ ಚೆನ್ನಕೇಶವ, ಮೇಲ್ವಿಚಾರಕ ಸುಧೀರ್ ನೆಕ್ರಾಜೆ, ಸೇವಾಪ್ರತಿನಿಧಿ ಐತಪ್ಪ, ಒಕ್ಕೂಟ ಅಧ್ಯಕ್ಷರು ವಾಣಿ, ಶ್ಯಾಮಲಾ, ಸುಮಲತಾ, ಸುಂದರ ಉಪಸ್ಥಿತರಿದ್ದರು.
- Sunday
- November 24th, 2024