ಅರಂತೋಡು ಗ್ರಾಮ ಪಂಚಾಯತ್ ನ ಅಡ್ತಲೆ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಅಂಗಾರರವರು ಫೆ.5 ರಂದು ಚಾಲನೆ ನೀಡಿದರು.
ರೂಪಾಯಿ 20.00 ಲಕ್ಷ ಅನುದಾನದ ಪಿಂಡಿಮನೆ – ಅರಮನೆಗಯ ರಸ್ತೆಯ ಕಾಂಕ್ರಿಟೀಕರಣ, ರೂಪಾಯಿ 22.50 ಲಕ್ಷ ಅನುದಾನದಲ್ಲಿ ಪಿಂಡಿಮನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಆಣೆಕಟ್ಟು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ರೂಪಾಯಿ 7.00 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡು ಅಭಿವೃದ್ಧಿ ಹೊಂದಿರುವ ಪಿಂಡಿಮನೆ – ಚೀಮಾಡು ರಸ್ತೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು ಅರಮನೆಗಯದಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣಕ್ಕೆ ರೂಪಾಯಿ 2.00 ಕೋಟಿ ಮೀಸಲಿಡಲಾಗಿದ್ದು ಮುಂದಿನ ಹಂತದಲ್ಲಿ ಕಾಮಗಾರಿ ಆರಂಭ ಆಗಲಿದೆ, ಈಗಾಗಲೇ ಈ ವಾರ್ಡ್ ನ ಅಡ್ತಲೆ – ಬೆದ್ರುಪಣೆ ರಸ್ತೆ, ಕಿರ್ಲಾಯ – ಓಟೆಡ್ಕ ರಸ್ತೆ, ಹಾಸ್ಪರೆ – ಕಲ್ಲುಗುಡ್ಡೆ ರಸ್ತೆಗಳ ಕಾಂಕ್ರಿಟೀಕರಣಕ್ಕೆ ಅನುದಾನ ಒದಗಿಸಿದ್ದು ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭ ಆಗಲಿದೆ. ಈ ವಾರ್ಡ್ ನ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲು ಬದ್ದ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಬಿ. ಜೆ. ಪಿ. ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಕೋಶಾಧಿಕಾರಿ ಶಿವಾನಂದ ಕುಕ್ಕುಂಬಳ, ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ವಾರ್ಡ್ ಸದಸ್ಯೆ ಶ್ರೀಮತಿ ಸುಜಯಾ ಲೋಹಿತ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪ ಮೇದಪ್ಪ, ಬೂತ್ ಅಧ್ಯಕ್ಷ ಲೋಹಿತ್ ಮೇಲಡ್ತಲೆ ಹಾಗೂ ಬಿ. ಜೆ. ಪಿ. ಕಾರ್ಯಕರ್ತರು, ಬಿ. ಜೆ. ಪಿ. ಯ ಎಲ್ಲ ಪ್ರಮುಖರು, ಮತ್ತು ಪಿಂಡಿಮನೆ, ಚೀಮಾಡು, ಅರಮನೆಗಯ ಸೇರಿದಂತೆ ವಾರ್ಡ್ ನ ಎಲ್ಲ ಸಾರ್ವಜನಿಕರು ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಸದಸ್ಯ ಹಾಗೂ ಬಿ. ಜೆ. ಪಿ. ಶಕ್ತಿ ಕೇಂದ್ರದ ಪ್ರಮುಖರಾದ ಕೇಶವ ಅಡ್ತಲೆ ಸ್ವಾಗತಿಸಿ ವಂದಿಸಿದರು.