ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು (ಫೆ.04) ದೇವಾಲಯದಲ್ಲಿ ಪೂರ್ವಾಹ್ನ ದೇವತಾ ಪ್ರಾರ್ಥನೆ ನಡೆಸಿ ನಂತರ ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು, ಪರಶುರಾಮ ಕಾಯಾರ ದೊಡ್ಡಮನೆ, ಶ್ರೀ ಕ್ಷೇತ್ರದ ಅರ್ಚಕರಾದ ಕೆ.ಎಸ್. ಗೋವಿಂದ ಭಟ್, ಸಹಾಯಕರಾದ ಮೋಹನ ಗುಂಡಿಹಿತ್ಲು ಮತ್ತು ರವಿಶಂಕರ ಕಾಂಚೋಡು, ಉತ್ಸವ ಸಮಿತಿ ಅಧ್ಯಕ್ಷರಾದ ಗಂಗಾಧರ.ಎಂ, ಆಡಳಿತ ಮಂಡಳಿ ಸದಸ್ಯರಾದ ಸತ್ಯನಾರಾಯಣ ಕಾಂಚೋಡು, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ವೈದಿಕ ಸಮಿತಿಯ ಲಕ್ಷ್ಮೀನಾರಾಯಣ ಕಾಂಚೋಡು, ಸಾಂಸ್ಕೃತಿಕ ಸಮಿತಿಯ ಶ್ರೀಮತಿ ಜಾಹ್ನವಿ ಕಾಂಚೋಡು, ದೈವಿಕ ಸಮಿತಿಯ ತಾರಾನಾಥ ಮಡಿವಾಳ, ಶೇಷಪ್ಪ ಪರವ, ನಾರಾಯಣ ಪರವ, ಜಯರಾಮ ಅಜಿಲ, ಸೇಸಪ್ಪ ಗೌಡ ಜೋಗಿಬೆಟ್ಟು, ಗಣೇಶ ಮುಗೇರ, ಜಾತ್ರೋತ್ಸವದ ವಿವಿಧ ಸಮಿತಿಗಳ ಸದಸ್ಯರುಗಳಾದ ಶ್ರೀಮತಿ ಕನಕಾವತಿ ಕಾಂಚೋಡು, ಅರುಣ್ ಕುಮಾರ್ ಕಾಂಚೋಡು, ಶಿವಪ್ಪ ನಾಯ್ಕ , ಚನಿಯಪ್ಪ ನಾಯ್ಕ, ಶ್ರೀಮತಿ ಕುಸುಮ, ಶ್ರೀಮತಿ ಲಕ್ಷ್ಮೀ, ಶ್ರೀಮತಿ ಸರೋಜ, ಕರುಣಾಕರ, ಶ್ರೀಮತಿ ಹರಿಣಾಕ್ಷಿ ಬರಮೇಲು, ಗುರುರಾಜ ಚಾಕೋಟೆಡ್ಕ, ಶ್ರೀಮತಿ ಪಾರ್ವತಿ ಕಾಂಚೋಡು, ಆದರ್ಶ ಕಾಂಚೋಡು ಮತ್ತಿತರರು ಉಪಸ್ಥಿತರಿದ್ದರು.