*ಶೈಖುನಾ ಅಬೂಬಕ್ಕರ್* *ಉಸ್ತಾದ್ ಆಂಡ್ ನೇರ್ಚೆ* ವಿಟ್ಲ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಇದರ ಸ್ಥಾಪಕ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಪ್ರಥಮ ಆಂಡ್ ನೇರ್ಚೆ ದಾರುನ್ನಜಾತ್ತ್ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ಜರಗಿತು. ಬೆಳಿಗ್ಗೆ 10.30 ಕ್ಕೆ ಧ್ವಜಾರೋಹಣ ದಾರುನ್ನ ಜಾತ್ತ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಹು ಮಹ್ಮೂದುಲ್ ಫೈಝಿ (ವಾಲೆಮುಂಡೋವು) ನಿರ್ವಹಿಸಿದರು.10.45 ಕ್ಕೆ ಕೂಟು ಝಿಯಾರತ್ಬಹು ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವದಲ್ಲಿ ಜರಗಿತು.11 ಗಂಟೆಗೆ *ಸ್ನೆಹಸಂಗಮ* ಜರಗಿತು.ಅಧ್ಯಕ್ಷತೆಯನ್ನು ಅಬೂಬಕ್ಕರ್ ಹಾಜಿ ಹೊಸಂಗಡಿ ನಿರ್ವಹಿಸಿದರು.ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರವೀಶ್ ಶೆಟ್ಟಿ ಉದ್ಘಾಟಿಸಿದರು.ಮಧ್ಯಾಹ್ನ 1 ಗಂಟೆಗೆ ಅಸ್ಸಯ್ಯದ್ ಪೂ ಕುಂಞಿ ತಂಙಳ್ ಉದ್ಯಾವರ ನೇತೃತ್ವದಲ್ಲಿ ಖತಮುಲ್ ಕುರ್ ಆನ್ ಮತ್ತು ಶೈಖುನಾ ಬೇಕಲ್ ಉಸ್ತಾದ್ ಅನುಸ್ಮಾರಣೆ ಜರಗಿತು.ರಾತ್ರಿ *7.30* ಕ್ಕೆ ಆಂಡ್ ನೇರ್ಚೆ ಸಮಾರೋಪ ಸಮಾರಂಭ ಬಹು ಅಸ್ಸಯ್ಯದ್ ಮುಕ್ತಾರ್ ತಂಗಳ್ ಕುಂಬೋಳ್ ನೇತೃತ್ವ ವಹಿಸಿದ್ದರು. ಅಧ್ಯಕ್ಷತೆಯನ್ನು ಮಹ್ಮೂದುಲ್ ಫೈಝಿ ವಾಲೆಮುಂಡೋವು ನಿರ್ವಹಿಸಿದರು. ಅನುಸ್ಮರಣಾ ಪ್ರಭಾಷಣ SYS ರಾಜ್ಯ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಮುಹಮ್ಮದ್ ಅಲಿ ಸಖಾಫಿ, ದಾರುನ್ನಜಾತ್ತ್ ಮುದರ್ರಿಸ್ ಅಬ್ದುಲ್ ಹಮೀದ್ ಲತೀಫಿ ನಡೆಸಿದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಉಸ್ಮಾನ್ ಸಖಾಫಿ, ಖಾದರ್ ಫೈಝಿ ಮಾತನಾಡಿದರು. ಈ ಸಂದರ್ಭದಲ್ಲಿ ಉಸ್ತಾದರ ಜೀವನ ಚರಿತ್ರೆ ಸ್ಮರಣಿಕೆ ಬಿಡುಗಡೆ ಗೊಳಿಸಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಇಸ್ಮಾಯಿಲ್ ಮಾಸ್ಟರ್ ಇವರನ್ನು ಸಂಸ್ಥೆ ವತಿಯಿಂದ ಸ್ನೇಹ ಸಂಗಮ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ದಾರುನ್ನಜಾತ್ತ್ ಮಾಜಿ ಮುದರ್ರಿಸ್ ಎಪಿ ಅಬೂಬಕ್ಕರ್ ಸಖಾಫಿ ಮುಸ್ತಫ ಹಾಜಿ ಸುಳ್ಯ ಯೂಸುಫ್ ಹಾಜಿ ಕೈಕಾರು ಮಾಧವ ಮಾ ಇಬ್ರಾಹಿಂ ಫೈಝಿ ಕನ್ಯಾನ, ಯೂಸುಫ್ ಸಾಜ, ಎಂಎಸ್ ಮುಹಮ್ಮದ್, ಅಬ್ದುರಹ್ಮಾನ್ ಮದನಿ, ಹಮೀದ್ ಸಖಾಫಿ, ಖಾದರ್ ಸಖಾಫಿ ಕಡಂಬು, ಡಾ ಹಸೈನಾರ್, ಚಂದಪ್ಪ, ಉಮೇಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಹಸೈನಾರ್ ಪತ್ರಕರ್ತರು ಸುಳ್ಯ, ಹಮೀದ್ ಮದನಿ ಬೊಳ್ಮಾರ್, ಹಸೈನಾರ್ ವಿಟ್ಲ ಪಟ್ಟಣ ಪಂಚಾಯಿತ್ ಸದಸ್ಯರಾದ ಹಸೈನಾರ್, ಇಸ್ಮಾಯಿಲ್ ಹಾಜಿ ಬನ್ನೂರು, ಎಸ್ಎಸ್ಎಫ್ ಜಿಲ್ಲಾ ಉಪಾಧ್ಯಕ್ಷ ಸಲೀಂ ಹಾಜಿ, ಅಬ್ದುರ್ರಝಾಕ್ ಸಅದಿ ಕೊಡಿಪ್ಪಾಡಿ, ಹಾಫಿಳ್ ಶರೀಫ್ ಮುಸ್ಲಿಯಾರ್ ಅಗ್ರಹಾರ, SMAರಾಜ್ಯ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್, SMAಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ SMA ವಿಟ್ಲ ಅಧ್ಯಕ್ಷರಾದ ಶರೀಫ್ ಉಕ್ಕುಡ, ಉಮ್ಮರ್ ವಿಟ್ಲ ಅತಿಥಿಯಾಗಿ ಭಾಗವಹಿಸಿ ಹಲವು ರಾಜಕೀಯ ಸಾಮಾಜಿಕ ಧಾರ್ಮಿಕ ನಾಯಕರು ಪಾಲ್ಗೊಂಡರು ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಸ್ವಾಗತಿಸಿದರು.
- Saturday
- November 23rd, 2024