ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸುಮಾರು ೨೫ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸದ ಶಂಕುಸ್ಥಾಪನಾ ಕಾರ್ಯಕ್ರಮವು ಇಂದು ಮುಹಿಯ್ಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಸೈಯ್ಯದ್ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬರಲು ಶ್ರಮ ವಹಿಸಿದ ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯ ಎಸ್ ಸಂಶುದ್ದೀನ್, ದುಗ್ಗಲಡ್ಕ ಮುಹಿಯ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಸೈನಾರ್ ಕೆ.ಎಂ, ಸೈಯ್ಯದ್ ಫಾರೂಕ್ ತಂಙಳ್ ಬನ್ಪುತ್ತಡ್ಕ, ದುಗ್ಗಲಡ್ಕ ಮುಹಿಯ್ಯದ್ದೀನ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹಂಝ ದೊಡ್ಡತೋಟ, ಖಿದ್ಮತ್ತುಲ್ ಇಸ್ಲಾಂ ಎಸೋಸಿಯೇಶನ್ ದುಗ್ಗಲಡ್ಕ ಇದರ ಪ್ರಧಾನ ಕಾಯದರ್ಶಿ ಅಬ್ದುಲ್ ಅಝೀಝ್ ಅಜ್ಮೀರ್, ಹುಸೈನಾರ್ ಕೆ.ಎಂ, ಮುಹಮ್ಮದ್ ಕೆ.ಎ, ಬಶೀರ್ ಸಪ್ನ, ಅಬ್ದುಲ್ಲ ಕೆ.ಎಂ, ಗುತ್ತಿಗೆದಾರರರಾದ ಇಬ್ರಾಹೀಂ ಅಡ್ಕಾರ್ ಮತ್ತಿತರರು ಉಪಸ್ಥಿತರಿದ್ದರು.