- ಹಸೈನಾರ್ ಜಯನಗರ
ಕೊರೋನ ವೈರಸ್ ಮಹಾಮಾರಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವುದನ್ನು ಕೈ ಬಿಟ್ಟಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಖಾಸಗಿ ಆಸ್ಪತ್ರೆಗಳು ಸಂಪೂರ್ಣವಾಗಿ ಸಂಪಾದನೆಯ ಚಿತ್ತದಲ್ಲಿ ತೊಡಗಿಸಿಕೊಂಡ ರೀತಿಯಲ್ಲಿ ಭಾಸವಾಗುತ್ತಿದೆ. ಕೊರೋನ ವೈರಸ್ ಗೆ ತುತ್ತಾಗಿ ಗಂಭೀರವಸ್ಥೆಗೊಂಡವರ ಬಡವರ ಗೋಳಂತೂ ಕೇಳುವವರೇ ಇಲ್ಲದಂತಾಗಿದೆ. ಸರಕಾರದ ಯಾವುದೇ ಯೋಜನೆಗಳು ಕೇವಲ ಪತ್ರಿಕಾ ಪ್ರಕಟನೆಗೆ ಮಾತ್ರ ಸೀಮಿತಗೊಂಡಿದೆ. ಬಡರೋಗಿಗಳ ಪಾಲಿಗಂತೂ ಈಗಿನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಆಸ್ಪತ್ರೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಲಕ್ಷಗಳದ್ದೇ ಮಾತಾಗಿದೆ. 4,5,ಲಕ್ಷಗಳ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಏನಿದ್ದರೂ 5 ಲಕ್ಷಕ್ಕೂ ಹೆಚ್ಚು ರೂಪಾಯಿ ಬೇಕೆಂದು ಆಸ್ಪತ್ರೆಯಲ್ಲಿ ಕೇಳಿಬರುತ್ತಿದೆ. ಒಬ್ಬ ಬಡರೋಗಿಗಳಿಗೆ ಸಹಾಯ ಮಾಡಲು ಸಮಾಜದ ಅನೇಕ ಸಂಘ ಸಂಸ್ಥೆಗಳು ಅಲ್ಪ ಸ್ವಲ್ಪ ಧನಿಕರ ಸಹಾಯ ಪಡೆದು ರೋಗಿಗಳ ಜೀವ ಉಳಿಸುವ ಪ್ರಯತ್ನದಲ್ಲಿ ತೊಡಗಿದರೆ, ಅವರ ಪ್ರಯತ್ನಗಳು ವಿಫಲವಾದ ನಿರ್ದರ್ಶನಗಳು ಕಂಡು ಬರುತ್ತಿದೆ. ಅಷ್ಟೂ ಲಕ್ಷ ರೂಪಾಯಿಗಳ ವೆಚ್ಚದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದೇ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಗಂಭೀರ ಅವಸ್ಥೆಗೆ ತಲುಪಿದ ನಂತರ ಆಸ್ಪತ್ರೆಗಳಿಗೆ ಹೋದಲ್ಲಿ ವೆಂಟಿಲೇಟರ್ ವ್ಯವಸ್ಥೆಗಳು ದೊರಕದೆ ಎಲ್ಲಾ ಕಡೆಗಳಲ್ಲಿ ಹೌಸ್ ಫುಲ್ ಬೋರ್ಡ್ ಹಾಕಲಾಗಿದೆ. ಎಲ್ಲೋ ಅವರ ಇವರ ಕೈಕಾಲುಗಳನ್ನು ಹಿಡಿದು ವೆಂಟಿಲೇಟರ್ ವ್ಯವಸ್ಥೆ ಸಿಕ್ಕಿದರು ಹಣದ ಮಳೆಯನ್ನೇ ಸುರಿಸಬೇಕಾಗುತ್ತದೆ.ಇದೀಗ ಜನಸಾಮಾನ್ಯರಿಗೆ ಉಳಿದಿರುವ ಒಂದೇ ದಾರಿ. ತನ್ನ ಮತ್ತು ತನ್ನ ಕುಟುಂಬದ ರಕ್ಷಣೆಗೆ ಆದ್ಯತೆ ನೀಡಿ ಈ ಎಲ್ಲಾ ಸಂಕಷ್ಟಗಳಿಂದ ಪಾರಾಗಬೇಕಾಗಿದೆ.ಅನಾವಶ್ಯಕ ಸುತ್ತಾಟ,ಜನನಿಬೀಡ ಸ್ಥಳಕ್ಕೆ ಭೇಟಿ ನೀಡದೇ ಇರುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು,ಸರ್ಕಾರದ ನಿರ್ದೇಶನ ಪಾಲಿಸುವುದು ಇದೊಂದೇ ದಾರಿಯನ್ನು ಅನುಸರಿಸ ಬೇಕಾಗಿದೆ.ಬಡವ ಶ್ರೀಮಂತನೆನ್ನದೇ ಎಲ್ಲರನ್ನೂ ಸರ್ವನಾಶಕ್ಕೆ ಕೊಂಡೊಯ್ಯಲು ಮುಂದಾಗಿರುವ ಈ ಮಹಾಮಾರಿ ವೈರಸ್ ವಿರುದ್ಧ ಅತ್ಯಂತ ಹೆಚ್ಚರಿಕೆಯಿಂದ ಹೋರಾಡಬೇಕಾಗಿದೆ.