Ad Widget

10 ದಿನಕ್ಕೆ ಕಾಲಿರಿಸಿದ ಸರಕಾರಿ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ, ಮತ್ತು ಸೇವಾ ಭದ್ರತೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಅಕ್ಟೋಬರ್ 3ರಂದು ಸುಳ್ಯ ತಾಲೂಕು ಕಚೇರಿ ವಠಾರದಲ್ಲಿ ನಡೆಯಿತು.

. . . . . . .


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಸಂಚಾಲಕ ಲೋಕೇಶ್ ಕಳೆದ 10 ದಿನಗಳಿಂದ ನಿರಂತರವಾಗಿ ನಾವು ವಿವಿಧ ರೀತಿಯ ಪ್ರತಿಭಟನೆಗಳನ್ನು ಮಾಡುತ್ತಿದ್ದರು ಸರ್ಕಾರ ನಮ್ಮ ಕಡೆ ಗಮನವೇ ಹರಿಸುತ್ತಿಲ್ಲ. ಎಲ್ಲಿಯವರೆಗೆ ನಮಗೆ ನ್ಯಾಯ ಸಿಗುವುದಿಲ್ಲವೋ ಈ ಹೋರಾಟವನ್ನು ನಾವು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಕೇವಲ ಕರೋನ ವಾರಿಯರ್ ಗಳಿಗೆ ಚಪ್ಪಾಳೆ ಮತ್ತು ದೀಪವನ್ನು ಬೆಳಗಿಸುದರಿಂದ ಅವರ ಹೊಟ್ಟೆ ತುಂಬುವುದಿಲ್ಲ. ನಮಗೆ ಬೇಕಾದ ಸೌಲಭ್ಯಗಳನ್ನು ನೀಡಲೇಬೇಕು ಮಾನವ ಸಂಪನ್ಮೂಲ ನೀತಿ ಜಾರಿಗೆ ತನ್ನಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ ಮಾತನಾಡಿ ಭಾವುಕರಾದರು. ಪ್ರತಿಭಟನಾಕಾರರಲ್ಲಿ ಡಿ ಗ್ರೂಪಿನ ಎರಡು ನೌಕರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದಾಗ ಅವರು ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿ ಸರ್ಕಾರದ ಬಡವರ ವಿರೋಧಿ ನೀತಿಗಳಿಗೆ ಕೊನೆಯೇ ಇಲ್ಲವೆ ಎಂದು ಪ್ರಶ್ನಿಸಿದರು. ನೋವಿನ ಸಂದರ್ಭದಲ್ಲಿ ಮನೆಮನೆಗೆ ತೆರಳಿ ದುಡಿಸಿಕೊಳ್ಳಲು ಈ ರೀತಿಯ ನೌಕರರ ಅವಶ್ಯಕತೆ ಇತ್ತು ಇದೀಗ ಸಂದರ್ಭದ ಲಾಭವನ್ನು ಪಡೆದ ನಂತರ ಅವರ ಸಮಸ್ಯೆಗಳ ಬಗ್ಗೆ ಕಿಂಚಿತ್ತು ಸ್ಪಂದನೆ ನೀಡುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು. ಇವರ ಹೋರಾಟದಲ್ಲಿ ನಾವು ಎಂದಿಗೂ ಸಾತ್ ನೀಡಲಿದ್ದೇವೆ ಅವಶ್ಯಕತೆ ಬಂದಲ್ಲಿ ಹೋರಾಟಗಾರರನ್ನು ಸುಳ್ಯ ಬೀದಿಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸರ್ಕಾರಕ್ಕೆ ಧಿಕ್ಕಾರ ವನ್ನು ಮೊಳಗಿಸುವ ಕೆಲಸವು ಮುಂದೆ ನಡೆಯಲಿದೆ ಎಂದು ಎಚ್ಚರಿಕೆಯನ್ನು ನೀಡಿದರು. ರಾಜಕೀಯ ಧರ್ಮದಲ್ಲಿ ಪ್ರಜೆಗಳ ಸಮಸ್ಯೆಗೆ ಸ್ಪಂದಿಸುವುದು ಅತಿ ಮುಖ್ಯವಾಗಿದೆ. ಇವರಿಗೆ ಪ್ರಜೆಗಳ ಸಮಸ್ಯೆ ಕಾಣುತ್ತಿಲ್ಲ ಎಂದು ಹೇಳಿದರು. ಲೋಕೇಶ್ ಸ್ವಾಗತಿಸಿ ಕಾರ್ಯದರ್ಶಿ ರಾಜಶೇಖರ್ ವಂದಿಸಿದರು ಆಶಿಕ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನಾ ಸಭೆಯಲ್ಲಿ ನೂರಾರು ನೌಕರರು ಉಪಸ್ಥಿತರಿದ್ದರು.


ಆಶಾ ಕಾರ್ಯಕರ್ತೆಯ ಮೇಲ್ವಿಚಾರಕಿ ಧನ್ಯಶ್ರೀ ಮಾತನಾಡಿ ಮೇಲ್ವಿಚಾರಕಿಯಾಗಿ ದುಡಿಯುವವರಿಗೆ ಆಶಾ ಕಾರ್ಯಕರ್ತರಿಗೂ ಒಂದೇ ವೇತನವನ್ನು ನೀಡುತ್ತಿದ್ದು ಕಳೆದ ಹತ್ತು ವರ್ಷದಿಂದ ಜಿಲ್ಲೆಯ ಸುಮಾರು ಒಂದುವರೆ ಸಾವಿರ ಆಶಾ ಕಾರ್ಯಕರ್ತರಿಗೆ ತರಬೇತಿಯನ್ನು ನೀಡುತ್ತಿರುವ ಮೇಲ್ವಿಚಾರಕಿ ಹುದ್ದೆಯಲ್ಲಿರುವವರಿಗೆ ವೇತನದಲ್ಲಿ ಹೆಚ್ಚಳ ಮಾಡಿರುವುದಿಲ್ಲ. ಕೊರೋನಾ ಬಂದಾಗಲೂ ನಮ್ಮ ಮನೆಯ ಮಕ್ಕಳನ್ನು ಬಿಟ್ಟು ರಾತ್ರಿ-ಹಗಲು ದುಡಿದರು ಇಲ್ಲಿಯವರೆಗೆ ಗೌರವಧನ ವು ಕೂಡ ಕೊಡಲಿಲ್ಲ ಎಂದು ಭಾವುಕರಾಗಿ ನುಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!