Ad Widget

ಸುಳ್ಯ ತಾಲೂಕು ಕಚೇರಿಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151 ನೇ ಜಯಂತಿ ಆಚರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಸುಳ್ಯ ತಹಸಿಲ್ದಾರ್ ಅನಂತ ಶಂಕರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಉದ್ಘಾಟನೆ ನೀಡಿದರು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಅನಂತ ಶಂಕರ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ದಬ್ಬಾಳಿಕೆಯಿಂದ ಅಹಿಂಸಾ ಮಾರ್ಗದ ಮೂಲಕ ಹೋರಾಟವನ್ನು ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಎಲ್ಲಾ ಸ್ವತಂತ್ರ ಹೋರಾಟಗಾರರ ನಾಯಕರ ಅದಿನಾಯಕ ನಾಗಿ ಗಾಂಧೀಜಿಯವರು ಸ್ವತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ತೋರಿಸಿಕೊಟ್ಟ ಅಹಿಂಸಾತ್ಮಕ ಚಳುವಳಿಯ ಮೂಲಕ ದೇಶ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಜೈ ಜವಾನ್ ಜೈ ಕಿಸಾನ್ ಘೋಷಣೆಯೊಂದಿಗೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸದಾ ತಮ್ಮನ್ನು ಅರ್ಪಿಸಿದ ದೇಶದ ಎರಡನೆಯ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆ ಕೊಂಡಾಡುವ ಸೌಭಾಗ್ಯ ನಮಗೆ ಸಾಧ್ಯವಾಗಿದೆ. ಮುಂದಿನ ಪೀಳಿಗೆ ದೇಶದ ಮಹಾನ್ ವ್ಯಕ್ತಿಯ ರ ನೆನಪಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ನಿರಂತರ ಆಚರಿಸಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಸ್ವಾಮಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಮಹಾನ್ ವ್ಯಕ್ತಿಗಳ ಗುಣಗಾನ ಮಾಡಲು ಅವಕಾಶ ಸಿಕ್ಕಿದ ನಾವು ಭಾಗ್ಯವಂತರು. ಮಹಾತ್ಮ ಗಾಂಧೀಜಿಯವರು ಅಧಿಕಾರದ ಆಸೆಯಿಂದ ದೇಶಕ್ಕಾಗಿ ಹೋರಾಟ ಮಾಡಿದವರಲ್ಲ. ದೇಶಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿದವರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಶಾಂತಿಯ ಪ್ರತೀಕವಾಗಿ ಒಂದು ದಿನದ ಕಾರ್ಯಕ್ರಮವನ್ನು ಅವರಿಗಾಗಿ ಮೀಸಲಿಟ್ಟಿದ್ದಾರೆ. ಕೇವಲ ಭಾರತಕ್ಕೆ ಮಾತ್ರವಲ್ಲ ದೆ ಇಡೀ ವಿಶ್ವಕ್ಕೆ ಅವರು ಮಾದರಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿಗಳ ಪಾದಸ್ಪರ್ಶದಿಂದ ನಮ್ಮ ದೇಶವು ಪವಿತ್ರ ಗೊಂಡಿದೆ. ಎಲ್ಲಿಯವರೆಗೆ ಭೂಮಂಡಲ ಇರುತ್ತದೆಯೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಗಾಂಧೀಜಿಯವರ ನೆನಪುಗಳು ಸ್ಥಿರವಾಗಿರುತ್ತದೆ. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಳ್ಯ ಸರ್ಕಾರಿ ಕಂದಾಯ ಅಧಿಕಾರಿ ಬಿ ಕೊರಗಪ್ಪ ಹೆಗ್ಡೆ, ಪಂಜ ಕಂದಾಯ ನಿರೀಕ್ಷಕ ಶಂಕರ್, ಉಪ ತಹಶಿಲ್ದಾರ್ ಚಂದ್ರಮೋಹನ್ ತಾಲೂಕು ಆಡಳಿತ ಸಮಿತಿಯ ಎಲ್ಲ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ಕಾರ್ಯಕ್ರಮ ನಿರೂಪಿಸಿ ಸಿಬ್ಬಂದಿ ಶಾಹಿನಾ ಸ್ವಾಗತಿಸಿ ಉಷಾ ವಂದಿಸಿದರು. ಸಿಬ್ಬಂದಿ ಮಹಾದೇವ ಸಂಸ್ಕರಣ ಮಾತನಾಡಿದರು. ಕವನ ಪ್ರಾರ್ಥನೆ ನಡೆಸಿದರು.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!