ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಗಾಂಧಿ ಜಯಂತಿ ಆಚರಣೆ ಮತ್ತು ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮ ಅ 2ರಂದು ಅಪರಾಹ್ನ4:00 ಗಂಟೆಗೆ ಸುಳ್ಯ ಲಯನ್ಸ್ ಸೇವಾಸದನದಲ್ಲಿ ನಡೆಯಲಿದೆ. ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪೆಲ್ತಡ್ಕ ರವರು ವಹಿಸಲಿದ್ದಾರೆ. ಇಡೀ ವಿಶ್ವವೇ ಮಾರಕ ಕೊರೋನ ವೈರಸ್ ಗೆ ತುತ್ತಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೊರೋನ ವೈರಸ್ ವಿರುದ್ಧ ಸಮರ ಸಾರಿರುವ ಕೊರೋನ ವಾರಿಯರ್ಸ್ ಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸುಳ್ಯ ನಗರ ವ್ಯಾಪ್ತಿಗೊಳಪಟ್ಟ ಪೊಲೀಸ್ ಇಲಾಖೆಯಿಂದ 7 ಮಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 7 ಮಂದಿ, ಸುಳ್ಯ ನಗರ ಪಂಚಾಯತ್ ನಿಂದ 7 ಮಂದಿ, ಗೃಹರಕ್ಷಕ ದಳದಿಂದ 7 ಮಂದಿ, ಆರೋಗ್ಯ ಇಲಾಖೆಯಿಂದ 26ಮಂದಿ, ಈ ರೀತಿ 52 ಮಂದಿ ಕೊರೋನ ವಾರಿಯರ್ಸ್ ಗಳಿಗೆ ಸನ್ಮಾನ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗಧಿಕಾರಿ ಡಾ. ಯತೀಶ್ ಉಳ್ಳಾಲ್, ಪಂಜ ಮಹಾತ್ಮಗಾಂಧಿ ವಿದ್ಯಾಪೀಠದ ಮುಖ್ಯಸ್ಥ ಪುರುಷೋತ್ತಮ ಮುಡೂರು, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎಂಬಿ ಸದಾಶಿವ, ಇನ್ನು ಅನೇಕ ಸಾಮಾಜಿಕ ಗಣ್ಯರು ಲಯನ್ಸ್ ಕ್ಲಬ್ಬಿನ ಮುಖ್ಯಸ್ಥರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.