ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಮಾರಸ್ವಾಮಿ ಪಿ.ಯು ಕಾಲೇಜಿನ ಎರಡು ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸುಬ್ರಹ್ಮಣ್ಯ, ಸೆ. 12: ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ), ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕುಮಾರಸ್ವಾಮಿ ಪಿ.ಯು. ಕಾಲೇಜು, ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ–2026 ಅನ್ನು ಸೆಪ್ಟೆಂಬರ್ 12ರಂದು ಕುಮಾರಸ್ವಾಮಿ ಪಿ.ಯು. ಕಾಲೇಜು, ಸುಬ್ರಹ್ಮಣ್ಯದಲ್ಲಿ ಆಯೋಜಿಸಲಾಯಿತು.

. . . . . . . . .

ಕಡಬ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ವಿಭಾಗದ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದರು. ಪಂದ್ಯಾವಳಿಯನ್ನು ಕೆಎಂಎಫ್ ಮಂಗಳೂರು ಸಂಸ್ಥೆಯ ಸಹಾಯಕ ವ್ಯವಸ್ಥಾಪಕರಾದ ಸಚಿನ್ ಚಿದ್ಗಲ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶಿವರಾಮ್ ಏನೆಕಲ್, ಸಂಸ್ಥೆಯ ಸಂಚಾಲಕರಾದ ಚಂದ್ರಶೇಖರ್ ನಾಯರ್, ಪ್ರಾಂಶುಪಾಲರಾದ ಡಾ. ಸಂಕೀರ್ತ್ ಹೆಬ್ಬಾರ್, ಸುಬ್ರಹ್ಮಣ್ಯ ಅತ್ಯಾಡಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾರತ್ನ, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ನಿರ್ದೇಶಕರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಚಿದ್ಗಲ್ ಹಾಗೂ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಪ್ರೀತಂ ಕೆ.ಪಿ. ಉಪಸ್ಥಿತರಿದ್ದರು.

. . . . . . .

ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಕುಮಾರಸ್ವಾಮಿ ಪಿ.ಯು. ಕಾಲೇಜು, ಸುಬ್ರಹ್ಮಣ್ಯ ಪ್ರಥಮ ಸ್ಥಾನ ಪಡೆದುಕೊಂಡರೆ, ಸೈಂಟ್ ಜೋಕಿಮ್ಸ್ ಕಾಲೇಜು, ಕಡಬ ದ್ವಿತೀಯ ಸ್ಥಾನ ಗಳಿಸಿತು.ಅದೇ ರೀತಿ ಬಾಲಕಿಯರ ವಿಭಾಗದಲ್ಲಿಯೂ ಕುಮಾರಸ್ವಾಮಿ ಪಿ.ಯು. ಕಾಲೇಜು, ಸುಬ್ರಹ್ಮಣ್ಯ ಪ್ರಥಮ ಸ್ಥಾನ ಪಡೆದುಕೊಂಡು, ಸೈಂಟ್ ಜೋಕಿಮ್ಸ್ ಕಾಲೇಜು, ಕಡಬ ದ್ವಿತೀಯ ಸ್ಥಾನ ಗಳಿಸಿತು.

ಕ್ರೀಡಾಪಟುಗಳ ಉನ್ನತ ಸಾಧನೆಗೆ ನಿರಂತರ ಪ್ರೋತ್ಸಾಹ ನೀಡಿದ ಸಂಸ್ಥೆಯ ಶಿವರಾಮ್ ಏನೆಕಲ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಕುಮಾರಿ ಪ್ರಜ್ಞಾ ಅವರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ಪಿ.ಯು. ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದು ದ್ವಿಗುಣ ಗೆಲುವು ಸಾಧಿಸಿವೆ. ಇದರೊಂದಿಗೆ ಎರಡೂ ತಂಡಗಳು ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿವೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಪಂದ್ಯಾವಳಿಯ ಯಶಸ್ವಿ ನಿರ್ವಹಣೆಯಲ್ಲಿ ತೀರ್ಪುಗಾರರಾದ ಕಾರ್ತಿಕ್ ಕಕ್ಕೆಪದವು ಹಾಗೂ ಸುಬ್ರಹ್ಮಣ್ಯ ಅವರು ಸಹಕರಿಸಿದರು.ಪಂದ್ಯಾವಳಿಯು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ, ಕ್ರೀಡಾ ಮನೋಭಾವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading