ಪರಿಶುದ್ಧ ಹಾಗೂ ಆರೋಗ್ಯಕರ ಆಹಾರ ಉತ್ಪನ್ನ ಆರಂಭಿಸಿದ ಜಲಕ್ಯ ಹೋಮ್ ಮೇಡ್ ಪ್ರಾಡಕ್ಟ್ಸ್ | ದೃಷ್ಡಿ ಕಡಿಮೆಯಿದ್ದರೂ ದೂರದೃಷ್ಟಿಯ ಯೋಜನೆ ರೂಪಿಸಿದ ನಿರಂಜನ ಕಡ್ಲಾರ್

ಸುಳ್ಯ: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆ ಹಾಗೂ ಕಲಬೆರಕೆಯ ಆಹಾರ ಸೇವನೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಪರಿಶುದ್ಧ ಹಾಗೂ ಮನೆಯಲ್ಲೇ ತಯಾರಿಸಿದ ಆಹಾರ ಉತ್ಪನ್ನಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಜಲಕ್ಯ ಹೋಮ್ ಮೇಡ್ ಪ್ರಾಡಕ್ಟ್ಸ್ ಸಂಸ್ಥೆ ಕಾರ್ಯಾರಂಭಿಸಿದೆ.

. . . . . . . . .

ಯಾವುದೇ ಕೆಮಿಕಲ್, ಕೃತಕ ಬಣ್ಣ ಅಥವಾ ಕಲಬೆರಕೆ ಬಳಸದೆ ಮನೆಯಲ್ಲೇ ತಯಾರಿಸಲಾದ ವಿವಿಧ ಆಹಾರ ಉತ್ಪನ್ನಗಳು ಹಾಗೂ ಮಸಾಲಾ ಪುಡಿಗಳನ್ನು ಸಂಸ್ಥೆ ಪರಿಚಯಿಸಿದೆ. ‘ಪೆಲ್ಕ’ ಹೆಸರಿನಲ್ಲಿ ಹಲಸಿನ ಬೀಜದ ಆರೋಗ್ಯಕರ ಮಾಲ್ಟ್ ಪೌಡರ್, ‘ಡಿಂಡಿಮ’ ಹೆಸರಿನಲ್ಲಿ ಮಾವಿನ ಮಿಡಿ ಉಪ್ಪಿನಕಾಯಿ ಹಾಗೂ ಉಪ್ಪಿನಲ್ಲಿ ಹಾಕಿದ ಹಲಸು (ಉಪ್ಪಡ್ ಪಚ್ಚಿಲ್) ಲಭ್ಯವಿದೆ.
‘ಸವಿಷ್ಟ’ ಹೆಸರಿನಲ್ಲಿ ಮೆಣಸಿನ ಪುಡಿ, ವೆಜ್ ಸಾಂಬಾರ್ ಪುಡಿ, ಚಿಕನ್ ಮಸಾಲಾ ಪುಡಿ, ಚಿಕನ್ ಸುಕ್ಕಾ ಪುಡಿ, ಚಿಕನ್ ಕಬಾಬ್ ಪುಡಿ, ಚಿಕನ್ ಪುಲಿಮುಂಚಿ ಪುಡಿ, ಫಿಶ್ ತವಾ ಅಂಡ್ ರವಾ ಪುಡಿ ಹಾಗೂ ಉಪ್ಪಿನಕಾಯಿ ಪುಡಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.
ಪರಿಶುದ್ಧ ಆಹಾರ ಸೇವನೆಯ ಮೂಲಕ ಆರೋಗ್ಯಕರ ಜೀವನ ನಡೆಸುವ ನಿಟ್ಟಿನಲ್ಲಿ ಸಂಸ್ಥೆಯ ಉತ್ಪನ್ನಗಳನ್ನು ಗ್ರಾಹಕರು ಬಳಸಿಕೊಂಡು ಪ್ರೋತ್ಸಾಹಿಸುವಂತೆ ಸಂಸ್ಥೆ ಮನವಿ ಮಾಡಿದೆ. ದೂರದ ಊರುಗಳ ಗ್ರಾಹಕರಿಗೆ ಕೊರಿಯರ್ ಮೂಲಕ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆಯೂ ಇದೆ.
ಹೆಚ್ಚಿನ ಮಾಹಿತಿಗಾಗಿ 9482861735, 6366821734 (ವಾಟ್ಸಪ್) ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರಂಜನ ಕಡ್ಲಾರು ತಿಳಿಸಿದ್ದಾರೆ.

. . . . . . .

ಇವರು ದೇವಚಳ್ಳ ಗ್ರಾಮದ ಕಡ್ಲಾರಿನವರು. ತನ್ನ ಕಣ್ಣಿನ ದೃಷ್ಡಿ ಕಡಿಮೆಯಿದ್ದರೂ ದೂರದೃಷ್ಟಿಯ ಆಲೋಚನೆಯಿಂದ ಆರೋಗ್ಯಕರವಾದ ಉತ್ಪನ್ನಗಳ ತಯಾರಿಕೆಗೆ ಪ್ರಯತ್ನ ಆರಂಭಿಸಿದ್ದಾರೆ. ತೀರಾ ಬಡತನದಲ್ಲಿರುವ ಇವರು ಕಡಿಮೆ ಬಂಡವಾಳ ಹಾಕಿ ಉದ್ಯಮ ಆರಂಭಿಸಿದ್ದಾರೆ. ಕೆಲಸ ಕಾರ್ಯಗಳಿಗೆ ಮನೆಯವರ ಸಹಕಾರ ಪಡೆದು ಹೋಮ್ ಮೇಡ್ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಸ್ವತಃ ಅವರೇ ಮಾರುಕಟ್ಟೆ ಮಾಡುತ್ತಿದ್ದು ಸುಳ್ಯ ಸಂತೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಅವರನ್ನು ಕಂಡಾಗ ಅವರ ಪ್ರಯತ್ನಕ್ಕೆ ನಮ್ಮದೊಂದು ಪ್ರೋತ್ಸಾಹ ನೀಡಲೇಕೆಂಬ ಉದ್ದೇಶದಿಂದ ಈ ವರದಿ ಮೂಡಿದೆ. ಓದುಗರಾದ ನಿಮ್ಮ ಸಹಕಾರ ಸಿಗಲಿ ಎಂಬುದೇ ಹಾರೈಕೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading