ಅಪಘಾತದ ಅರಿವು – ಉಲ್ಲಾಸ್ ಕಜ್ಜೋಡಿ

ವಾಹನದಲ್ಲಿ ಪ್ರಯಾಣ-ರಸ್ತೆಯ ಮೇಲಿಡಬೇಕು ನಮ್ಮ ಕಣ್ಣು, ಮೂಗು, ಬಾಯನ್ನ…
ಎಚ್ಚರ ತಪ್ಪಿದರೆ ನಮ್ಮಯ ಜೀವಕ್ಕೆ ಅಪಘಾತ-ಮನೆಯವರ ಬದುಕಿಗೆ ಸಿಡಿಲಾಘಾತ…
ಬೇಕಾಬಿಟ್ಟಿ ಪ್ರಯಾಣ-ಅದಾಗಬಹುದು ನಮ್ಮ ಬದುಕಿನ ಕೊನೆಯಣ್ಣ…
ವೇಗದ ಹಾದಿ-ಆಗಬಹುದು ಅಪಘಾತಕ್ಕೆ ಬುನಾದಿ…
ನಿಗದಿತವಾದ ಸ್ಪೀಡು-ಜೀವಕ್ಕಿಲ್ಲ ಯಾವುದೇ ಕೇಡು…
ಓವರ್ ಸ್ಪೀಡು-ಅದಂತೂ ತುಂಬಾ ಬ್ಯಾಡು…
ಅತೀ ವೇಗದ ಸಂಚಾರ-ನಮ್ಮಯ ಬದುಕಿಗೆ ಸಂಚಕಾರ…
ನಿಯಮಿತವಾದ ವಾಹನ ಚೆಕ್‌ಅಪ್ಪು-ನಮಗೂ, ನಮ್ಮ ಗಾಡಿಗೂ ಎಂದೂ ಆಗದು ಬ್ರೇಕ್‌ಅಪ್ಪು…
ಪದೇಪದೇ ಓವರ್‌ಟೇಕ್ ಮಾಡೋ ಖಯಾಲಿ-ಈ ಭೂಮಿಯಿಂದ ಅರೆಕ್ಷಣದಲಿ ನಾವಾಗಬಹುದು ಖಾಲಿ…
ತಲೆಯಲ್ಲಿರಲಿ ಸದಾ ಹೆಲ್ಮೆಟ್ಟು-ನಮ್ಮ ದೇಹದಲ್ಲಿ ಮೆದುಳಲ್ಲವೇ ಎಲ್ಲಕ್ಕಿಂತಲೂ ಹೆಚ್ಚು ಸ್ಮಾರ್ಟೆಸ್ಟು…
ಸದಾ ಧರಿಸೋಣ ನಾವು ಸೀಟ್‌ಬೆಲ್ಟು-ಗ್ರಹಾಚಾರ ಕೆಟ್ಟರೆ ಬೇರಾಗಬಹುದು ನಮ್ಮ ದೇಹದ ನಟ್ಟ್‌ಬೋಲ್ಟು…
ಸದಾ ಪಾಲಿಸೋಣ ನಾವು ಸಂಚಾರಿ ನಿಯಮಗಳನ್ನ-ಏಕೆಂದರೆ ಮನೆಯವರು ಸದಾ ಕಾಯುತ್ತಿರುವರು ನಮ್ಮನ್ನ-ಮರೆಯದಿರೋಣ ನಾವಿದನ್ನ… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading