ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದರ್ಶಿಕ್‌ ಸಿ.ಎಸ್.ಗೆ ಚಿನ್ನ ಹಾಗೂ ಬೆಳ್ಳಿ ಪದಕ

ಯುನೈಟೆಡ್ ಕರಾಟೆ ಬುಡೋಕಾನ್ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಳ್ಳಂಗಾರಿನ ದರ್ಶಿಕ್ ಸಿ.ಎಸ್. ಅವರು ಉತ್ತಮ ಸಾಧನೆ ಮಾಡಿದ್ದಾರೆ.

. . . . . . . . .

10 ವರ್ಷ ಮೇಲ್ಪಟ್ಟ 25 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿದ ದರ್ಶಿಕ್ ಅವರು ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

. . . . . . .

ದರ್ಶಿಕ್ ಅವರು ಅಲೆಟ್ಟಿ ಗ್ರಾಮದ ಚಳ್ಳಂಗಾರು ನಿವಾಸಿಗಳಾದ ಸುರೇಶ್ ಮತ್ತು ಗೀತಾ ದಂಪತಿಯ ಪುತ್ರರಾಗಿದ್ದು, ಸಂತ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕರಾಟೆ ಶಿಕ್ಷಕರಾದ ಧನುಷ್ ಹಾಗೂ ಉದಯ ಅವರು ದರ್ಶಿಕ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading