ದೀಪಾವಳಿ ವಿಶೇಷಾಂಕಕ್ಕೆ ಬರಹ, ಛಾಯಾಚಿತ್ರ ಆಹ್ವಾನ

ಸುಳ್ಯ: ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ ‘ಅಮರ ಸುಳ್ಯ ಸುದ್ದಿ’ ವಾರಪತ್ರಿಕೆಯ 10ನೇ ವರ್ಷದ ದೀಪಾವಳಿ ವಿಶೇಷಾಂಕ-2026 ಪ್ರಕಟಿಸಲು ಸಿದ್ಧತೆ ನಡೆಸಲಾಗಿದ್ದು, ವಿಶೇಷಾಂಕದಲ್ಲಿ ಸಾರ್ವಜನಿಕರು ಹಾಗೂ ಬರಹಗಾರರು ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.

. . . . . . . . .

ಸುಮಾರು 100 ಪುಟಗಳ ವರ್ಣಮಯ ವಿಶೇಷಾಂಕದಲ್ಲಿ ಕಥೆ, ಕವನ, ಲೇಖನ, ಸಾಧಕರ ಪರಿಚಯ, ಮುದ್ದು ಮಕ್ಕಳ ಛಾಯಾಚಿತ್ರ ಸೇರಿದಂತೆ ವೈವಿಧ್ಯಮಯ ಬರಹಗಳು ಪ್ರಕಟಗೊಳ್ಳಲಿವೆ. ಸಾರ್ವಜನಿಕರು ತಮ್ಮ ಬರಹಗಳು ಹಾಗೂ ಛಾಯಾಚಿತ್ರಗಳನ್ನು ಕಳುಹಿಸುವ ಮೂಲಕ ವಿಶೇಷಾಂಕದ ಭಾಗವಾಗಬಹುದು.

. . . . . . .

ವಿಶೇಷಾಂಕದಲ್ಲಿ ‘ನಗು-ಮಗು’ ವಿಭಾಗದಡಿ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳ ಭಾವಚಿತ್ರಗಳನ್ನು ಆಹ್ವಾನಿಸಲಾಗಿದ್ದು, ಉತ್ತಮ ಛಾಯಾಚಿತ್ರಗಳಿಗೆ ಬಹುಮಾನ ನೀಡಲಾಗುವುದು. ಛಾಯಾಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನಾಂಕ, ತಂದೆ-ತಾಯಿ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಿ, ಫೋಟೋದೊಂದಿಗೆ ಕಳುಹಿಸಿ.

‘ಅಜ್ಜಿಯ ದೀಪಾವಳಿ–ಒಂದು ತಲೆಮಾರಿನ ನೆನಪುಗಳು’ ವಿಭಾಗದಲ್ಲಿ ಹಳೆಯ ಕಾಲದ ಎಣ್ಣೆ ಸ್ನಾನ, ಹಬ್ಬದ ಅಡುಗೆ, ಹೊಸ ಬಟ್ಟೆ, ಪಟಾಕಿ, ಮನೆ-ಮನೆಗಳ ಸಂಭ್ರಮ, ದೇವಸ್ಥಾನ ಹಾಗೂ ಸಂಪ್ರದಾಯಗಳ ಕುರಿತ ನೆನಪುಗಳನ್ನು ಹಂಚಿಕೊಳ್ಳಬಹುದು. ‘ದೀಪಾವಳಿಯ ಸವಿಯಲ್ಲಿ ಅಡಗಿದ ಸಂಬಂಧಗಳು’ ವಿಭಾಗದಲ್ಲಿ ಕುಟುಂಬ, ಬಂಧು-ಬಳಗ ಹಾಗೂ ಸ್ನೇಹಿತರ ನಡುವಿನ ಆತ್ಮೀಯತೆ ಮತ್ತು ಸಂಬಂಧಗಳ ಮಹತ್ವದ ಕುರಿತು ಬರಹಗಳನ್ನು ಆಹ್ವಾನಿಸಲಾಗಿದೆ.

ಅದೇ ರೀತಿ ‘ನಾ ಮೆಚ್ಚಿದ ಗುರು’ ವಿಭಾಗದಲ್ಲಿ ಜೀವನದಲ್ಲಿ ಮರೆಯಲಾಗದ ಶಿಕ್ಷಕರ ಕುರಿತ ಬರಹದೊಂದಿಗೆ ಅವರ ಛಾಯಾಚಿತ್ರವನ್ನು ಕಳುಹಿಸಬಹುದು. ‘ಕಳೆದುಹೋದ ಬಾಲ್ಯದ ನೆನಪುಗಳು’, ‘ಸಮಯವಿಲ್ಲದ ಮನುಷ್ಯ’, ‘ನಮ್ಮೂರಿನ ಕಣ್ಮರೆಯಾಗುತ್ತಿರುವ ವೃತ್ತಿಗಳು’, ‘ಸೆಲ್ಫಿಯದ್ದೇ ಹವಾ’ ಹಾಗೂ ವಿವಿಧ ಕ್ಷೇತ್ರಗಳ ‘ಸಾಧಕರು’ ವಿಭಾಗಗಳಿಗೂ ಬರಹ ಮತ್ತು ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ.

ಕಥೆಗಳು 4 ಪುಟಗಳ ಒಳಗೆ ಹಾಗೂ ಕವನಗಳು 24 ಗೆರೆಗಳ ಒಳಗೆ ಇರಬೇಕು. ಹನಿಗವನ, ಚುಟುಕು, ಹಾಸ್ಯ ಬರಹ, ವ್ಯಂಗ್ಯಚಿತ್ರ ಹಾಗೂ ವಿಶೇಷ ಲೇಖನಗಳನ್ನೂ ಕಳುಹಿಸಬಹುದಾಗಿದೆ. ಬರಹದೊಂದಿಗೆ ಸಂಬಂಧಿಸಿದ ಛಾಯಾಚಿತ್ರ, ಲೇಖಕರ ಛಾಯಾಚಿತ್ರ, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಬರಹ ಹಾಗೂ ಛಾಯಾಚಿತ್ರಗಳನ್ನು ಸೆಪ್ಟೆಂಬರ್ 30ರೊಳಗೆ ಕಳುಹಿಸಬೇಕು. ಜತೆಗೆ ಜಾಹೀರಾತುದಾರರಿಗೂ ವಿಶೇಷಾಂಕದಲ್ಲಿ ಉತ್ತಮ ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಬರಹಗಳನ್ನು ‘ದೀಪಾವಳಿ ವಿಶೇಷಾಂಕ ವಿಭಾಗ, ಅಮರ ಸುಳ್ಯ ಸುದ್ದಿ, ವಿನಾಯಕ ಕಾಂಪ್ಲೆಕ್ಸ್, ರಥಬೀದಿ, ಸುಳ್ಯ’ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9449387044, 7338248044 ಹಾಗೂ amarasuddi@gmail.com ಸಂಪರ್ಕಿಸಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading